ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕಾಕದ ಅರಭಾವಿಯಲ್ಲಿ ಭಾರೀ ವಂಚನೆ

By Staff
|
Google Oneindia Kannada News

Belgaum news
ಬೆಳಗಾವಿ, ನ. 21 : ಜಿಲ್ಲಾಧಿಕಾರಿ ಡಾ. ಜೆ. ರವಿಶಂಕರ ಅವರ ನಿರ್ದೇಶನದ ಮೇರೆಗೆ ಗೋಕಾಕ ತಾಲೂಕಿನ ಅರಭಾವಿಯಲ್ಲಿ 1677 ಮಂದಿ ಅನರ್ಹರಿಗೆ ಮಂಜೂರಾಗಿದ್ದ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಅನರ್ಹರಿಗೆ ಪಿಂಚಣಿ ಮಂಜೂರು ಮಾಡಿದ ತಪ್ಪಿತಸ್ಥ ಸಿಬ್ಬಂದಿಗಳ ಮೇಲೂ ಶಿಸ್ತಿನ ಕ್ರಮ ಸಹ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಗೋಕಾಕ ತಾಲೂಕಿನ ಮೂಡಲಗಿಯ ಭೀಮಪ್ಪ ಗುಂಡಪ್ಪ ಗಡಾದ ಅವರು ನೀಡಿದ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಈ ಕುರಿತಂತೆ ತನಿಖೆ ಕೈಗೊಳ್ಳಲು ಬೆಳಗಾವಿ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಉಪವಿಭಾಗಾಧಿಕಾರಿಗಳು ಗೋಕಾಕ ತಹಸೀಲದಾರರಿಗೆ ವರದಿ ನೀಡುವಂತೆ ಸೂಚಿಸಿದ್ದರು.1677 ಪ್ರಕರಣಗಳಲ್ಲಿ ಅನರ್ಹರ ಪಿಂಚಣಿ ಪಡೆದದ್ದು ಬಹಿರಂಗವಾಯಿತು. ಈ ಪಿಂಚಣಿ ಪಡೆಯಲು ಖೊಟ್ಟಿ ದಾಖಲೆ ನೀಡಿದವರ ಮೇಲೆಯೂ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಬೆಳೆ ವಿಮೆ : ರೈತರಿಗೆ ಸೂಚನೆ

ಜೋಳ ನೀರಾವರಿ, ಜೋಳ ಖುಷ್ಕಿ, ಗೋಧಿ ನೀರಾವರಿ, ಗೋಧಿ ಖುಷ್ಕಿ, ಕಡಲೆ ನೀರಾವರಿ, ಕಡಲೆ ಖುಷ್ಕಿ ಬೆಳೆಯನ್ನು ಬೆಳೆದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಅಥಣಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಈ ಬೆಳೆಗಳಿಗೆ ವಿಮೆ ಮಾಡಿಸಲು ಸಾಲ ಪಡೆದ ರೈತರು ಸಂಬಂಧಿಸಿದ ಬ್ಯಾಂಕ್‌ಗಳಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಕಡಲೆ ನೀರಾವರಿ ಹಾಗೂ ಕಡಲೆ ಒಣ ಬೇಸಾಯ ಬೆಳೆಗಳಿಗೆ ನವೆಂಬರ್ 30 ಹಾಗೂ ಉಳಿದ ಬೆಳೆಗಳಿಗೆ ಕೊನೆಯ ದಿನಾಂಕ ಡಿಸೆಂಬರ್ 31. ಹಾಗೂ ಉಳಿದ ಬೆಳೆಗಳಿಗೆ ನವೆಂಬರ್ 30 ಕೊನೆಯ ದಿನಾಂಕ ಆಗಿರುತ್ತದೆ. ಸಾಲ ಪಡೆದ ರೈತರಿಗೆ ಈ ವಿಮೆ ಕಡ್ಡಾಯವಾಗಿರುತ್ತದೆ. ಈ ವಿಮೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆ, ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಇಂಡಿಯಾ ಲಿ.

ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಜೋಳ ನೀರಾವರಿ, ಜೋಳ ಖುಷ್ಕಿ, ಜೋಳ ನೀರಾವರಿ, ಗೋಧಿ ನೀರಾವರಿ, ಗೋಧಿ ಮಳೆ ಆಶ್ರಿತ, ಕಡಲೆ ನೀರಾವರಿ, ಕಡಲೆ ಒಣ ಬೇಸಾಯ, ಸೂರ್ಯಕಾಂತಿ ನೀರಾವರಿ, ಸೂರ್ಯಕಾಂತಿ ಒಣ ಬೇಸಾಯ, ಕುಸುಬೆ ಮಳೆ ಆಶ್ರಿತ, ಈ ಬೆಳೆಗಳಿಗೆ ಹಿಂಗಾರು ಹಂಗಾಮಿಗೆ ಹಾಗೂ ಸೂರ್ಯಕಾಂತಿ ನೀರಾವರಿ, ಬೇಸಿಗೆ ಹಂಗಾಮಿಗೆ ರೈತರು ವಿಮೆಯನ್ನು ಮಾಡಿಸಬಹುದಾಗಿದೆ. ಮೇಲಿನ ಬೆಳೆಗಳನ್ನು ಬೆಳೆದ ಬೆಳೆ ಸಾಲ ಪಡೆದ ರೈತರು ಇದರಲ್ಲಿ ಭಾಗವಹಿಸುವಂತಿಲ್ಲ.

ಅಂಥ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಮಾತ್ರ ಭಾಗವಹಿಸಬಹುದು. ಇತರೇ ರೈತರು ಇದರಲ್ಲಿ ಭಾಗವಹಿಸುವುದು ಐಚ್ಛಿಕವಾಗಿರುತ್ತದೆ. ಬೆಳೆ ಬಿತ್ತಿದ 30 ದಿನಗಳೊಳಗಾಗಿ ಬ್ಯಾಂಕಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಬೆಳೆ ಹಾಗೂ ಬೆಳೆ ಆರೋಗ್ಯಕರವಾಗಿರಬೇಕು. ಪ್ರಸ್ತಾವನೆಗಳನ್ನು ಸಲ್ಲಿಸಲು ಹಿಂಗಾರು ಹಂಗಾಮಿಗೆ ಕೊನೆಯ ದಿನ ಡಿಸೆಂಬರ್ 31 ಹಾಗೂ ಬೇಸಿಗೆ ಹಂಗಾಮಿಗೆ ಕೊನೆಯ ದಿನ 2010ರ ಫೆಬ್ರವರಿ 28. ಬೇಸಿಗೆ ಹಂಗಾಮಿಗೆ ಸೂರ್ಯಕಾಂತಿ (ನೀರಾವರಿ) ಬೆಳೆಗೆ ಮಾತ್ರ ರೈತರು ವಿಮೆ ಮಾಡಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಸ್ಥಳೀಯ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕ್‌ಗಳು, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X