• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ಡಿಗಳನ್ನು ವಿಲನ್ ಗಳಂತೆ ಬಿಂಬಿಸುತ್ತಿರುವುದೇಕೆ?

By Staff
|

ಹುಬ್ಬಳ್ಳಿ, ನ. 20 : ಸರಕಾರ ರಚನೆ ಮಾಡುವಾಗ ರೆಡ್ಡಿ ಸಹೋದರರನ್ನು ಹೀರೊಗಳಂತೆ ಮೆರೆಸಿ ಇದೀಗ ಖಳನಾಯಕರಂತೆ ಬಿಂಬಿಸುತ್ತಿರುವ ಬೆಳವಣಿಗೆಗಳ ಬಗ್ಗೆ ನೂತನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮ್ಮ ಮನೆ ತಲುಪಿದ ಶೆಟ್ಟರ್, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಿಜೆಪಿ ಸರಕಾರ ರಚನೆ ಮಾಡುವಾಗ ರೆಡ್ಡಿಗಳು ಬೇಕಿತ್ತು. ಆದರೆ, ಇದೀಗ ರೆಡ್ಡಿ ಏಕೆ ಬೇಡವಾಗಿದ್ದಾರೆ? ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಅವರನ್ನು ಎಲ್ಲ ರೀತಿಯಿಂದಲೂ ಬಳಿಸಿಕೊಂಡು ಇದೀಗ ವಿಲನ್ ಗಳಂತೆ ಬಿಂಬಿಸುವ ಯತ್ನ ಸಾಗಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶೆಟ್ಟರ್, ಗ್ರಾಮೀಣ ಪ್ರದೇಶದಿಂದ ಬಂದವನಾದ್ದರಿಂದ ಗ್ರಾಮೀಣ ಭಾಗದ ಜನರ ನೋವು ನಲಿವು ನನಗೆ ಗೊತ್ತಿದ್ದರಿಂದ ಜನಪರ ಕೆಲಸ ಮಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶೆಟ್ಟರ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X