ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಲ್ಲಿ ಮನೆ ನಿರ್ಮಾಣ ಸೇವೆ

By Staff
|
Google Oneindia Kannada News

Yeddyurappa, Karunakar Reddy, Parshwanath
ಬೆಂಗಳೂರು, ನ 20 : ಕರ್ನಾಟಕ ಸೇವಾ ಭಾರತಿ ಸಂಸ್ಥೆ ರಾಜ್ಯದ ಆರು ನೆರೆಪೀಡಿತ ಜಿಲ್ಲೆಗಳ ಹನ್ನೊಂದು ತಾಲ್ಲೂಕುಗಳ 15 ಗ್ರಾಮಗಳಲ್ಲಿ 2371 ಮನೆಗಳ ನಿರ್ಮಾಣ ಕಾರ್ಯವನ್ನು ಸಾರ್ವಜನಿಕರ ಧನಸಹಾಯದ ನೆರವಿನೊಂದಿಗೆ ಮಾಡಲಿದೆ ಎಂದು ಕಂದಾಯ ಕಾರ್ಯದರ್ಶಿಗಳಾದ ಪಾರ್ಶ್ವನಾಥ್ ಅವರು ಹೇಳಿದ್ದಾರೆ.

ಮನೆ ನಿರ್ಮಾಣಕ್ಕೆ ಸರ್ಕಾರವು 30 x 50 ಅಳತೆಯ ನಿವೇಶನಗಳನ್ನು ನೀಡಿದ್ದು, 2290 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಲಿದ್ದು ಮನೆಯೊಂದಕ್ಕೆ 1.3 ಲಕ್ಷ ರು. ವೆಚ್ಚವಾಗಲಿರುವುದಾಗಿಯೂ, ಡಿಸೆಂಬರ್ 1ರಿಂದ ನಿರ್ಮಾಣ ಕಾರ್ಯ ಆರಂಭಿಸಲಿರುವುದಾಗಿ ತಿಳಿಸಿದರು. ಈ ಕುರಿತು ಸಂಸ್ಥೆ ಸರಕಾರದೊಡನೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ತಾವು ಶುಕ್ರವಾರದಿಂದ ಗುಲ್ಬರ್ಗಾ ಜಿಲ್ಲೆಯ ನೆರೆ ಸಂತ್ರಸ್ತ ಸ್ಥಳಗಳಲ್ಲಿ ಪ್ರವಾಸ ಮಾಡಲಿರುವುದಾಗಿ ತಿಳಿಸಿದರು. ಈ ತಿಂಗಳ ಕೊನೆಯ ವೇಳೆಗೆ ಎಲ್ಲ ನೆರೆಪೀಡಿತ ಜಿಲ್ಲೆಗಳಲ್ಲಿಯೂ ಮನೆ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ಮಾಡಲಾಗುವುದು. ಡಿಸೆಂಬರ್ 1ರಿಂದ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಚಾಲನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಗ್ರಾಮಗಳ ಸ್ಥಳಾಂತರ, ಬೆಳೆ ಪರಿಹಾರ ನೀಡಿಕೆ ಕಾರ್ಯಗಳಿಗೆ ಪ್ರಸಕ್ತ ಸರ್ಕಾರವು ತುರ್ತಾಗಿ ಸ್ಪಂಧಿಸಿದ್ದು 1500 ಕೋಟಿ ರು. ಅನುದಾನದಲ್ಲಿ ಈಗಾಗಲೇ 1200 ಕೋಟಿ ರು. ಗಳನ್ನು ನೆರೆಪೀಡಿತರ ನೆರವಿಗಾಗಿ ವೆಚ್ಚಮಾಡಲಾಗಿದೆ ಎಂದು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X