ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ರೈಲ್ವೆ ಪರೀಕ್ಷೆ : ಮುನಿಯಪ್ಪ

By Staff
|
Google Oneindia Kannada News

Karave protest
ಬೆಂಗಳೂರು, ನ. 19 : ಕನ್ನಡಪರ ಸಂಘಟನೆಗಳ ಸತತ ಪ್ರಯತ್ನ ಹಾಗೂ ಕನ್ನಡಿಗರ ಬಹುದಿನದ ಕನಸನ್ನು ಕೇಂದ್ರ ಸರಕಾರ ಕೊನೆಗೂ ಈಡೇರಿಸಿದೆ. ಕಬ್ಬಿಣದ ಕಡಲೆಯಾಗಿದ್ದ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡದಲ್ಲೇ ಬರೆಯಬಹುದಾಗಿದೆ. ಕನ್ನಡಪರ ಹೋರಾಟಗಾರರ ಫಲವನ್ನು ಬರೀ ಕನ್ನಡಿಗರಷ್ಟೆ ಅಲ್ಲ ಆಯಾ ಭಾಷೆಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿದ್ದಾರೆ.

ಇನ್ನೂ ಮುಂದೆ ರೈಲ್ವೆ ಇಲಾಖೆಯಲ್ಲಿ ನಡೆಯುವ ಪರೀಕ್ಷೆಗಳನ್ನು ತ್ರಿಭಾಷಾ ಸೂತ್ರ ಅಳವಡಿಸಲು ನಿರ್ಧರಿಸಲಾಗಿದೆ. ಅಂದರೆ, ಇಂಗ್ಲಿಷ್ ಅಥವಾ ಹಿಂದಿ ಅಥವಾ 22 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ. ಇದಲ್ಲದೆ, ವಿವಿಧ ರೈಲ್ವೆ ಮಂಡಳಿಗಳ ಅಡಿಯಲ್ಲಿ ನಡೆಯುತ್ತಿದ್ದ ಪರೀಕ್ಷೆಗಳು ಇನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿವೆ. ಉರ್ದು ಭಾಷೆಯಲ್ಲೂ ಕೂಡಾ ರೈಲ್ವೆ ಪರೀಕ್ಷೆ ನಡೆಯಲಾಗುವುದು ಎಂದು ಕೇಂದ್ರ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದರಿಂದ ಯಾವುದೇ ರಾಜ್ಯಗಳ ಒಬ್ಬನೇ ಒಬ್ಬ ಅಭ್ಯರ್ಥಿಗೆ ಅನ್ಯಾಯವಾಗುವುದಿಲ್ಲ. ಅರ್ಹರಿಗೆ ಉದ್ಯೋಗ ಲಭಿಸುವುದು ಖಚಿತ. ಈ ಪರೀಕ್ಷೆಯಲ್ಲಿ ಪಾರದರ್ಶಕತೆ ಇರುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ಕೆ ಎಚ್ ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ, ಕರವೇ ಕಳೆದ ಎರಡು ವರ್ಷಗಳ ನಡೆಸಿದ ಸತತ ಪ್ರಯತ್ನದಿಂದ ಜಯ ಸಂದಿದೆ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಕೊರತೆಯನ್ನು ನಿಗಿಸುವ ನಿಟ್ಟಿನಲ್ಲಿ ಕರವೇ ಪ್ರಾಮಾಣಿಕವಾಗಿ ಹೋರಾಟ ನಡೆಸಿತ್ತು. ಇದಕ್ಕೆ ಸರಕಾರ ಫಲ ನೀಡಿದೆ ಎಂದು ಅವರ ಸಂತಸ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X