ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ದೂರು ಸಲ್ಲಿಸಲು ಬಿಬಿಎಂಪಿ ಕ್ರಮ

By Staff
|
Google Oneindia Kannada News

Bharatlal meena
ಬೆಂಗಳೂರು, ನ. 19 : ನಿಮ್ಮ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿವೆಯೇ ? ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೇ ? ಚರಂಡಿಗಳು ಹಾಳಾಗಿವೆಯೇ ? ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆಯೇ ? ಈ ತರಹದ ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೂತನ ವೆಬ್ ಸೈಟ್ ರೂಪಿಸಿದ್ದು, ಪಾಲಿಕೆ ಆಡಳಿತಾಧಿಕಾರಿ ಕೆ ಎಂ ಶಿವಕುಮಾರ್ ಅವರು ಮಂಗಳವಾರ ಈ ವೆಬ್ ಸೈಟ್ ಗೆ ಚಾಲನೆ ನೀಡಿದರು. ನಗದ ವಿವಿದಡೆ ಪ್ರಗತಿಯಲ್ಲಿರುವ 9000 ಕಾಮಗಾರಿಗಳ ವಿವರಗಳನ್ನು ಪಾಲಿಕೆ ಈ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ಹಾಗೆಯೇ ಕಾಮಗಾರಿ ಪೂರ್ಣಗೊಳ್ಳುಬೇಕಾದ ಅವಧಿ, ಗುಣಮಟ್ಟ, ವಿಳಂಬ ಇತರೆ ಮಾಹಿತಿಕೂಡ ಇರಲಿದೆ. ಒಂದು ವೇಳೆ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದರೆ, ಲೋಪದೋಷಗಳಿದ್ದರೆ ಈ ಬಗ್ಗೆ ಮಾಹಿತಿ ನೀಡಬಹುದು. ಈ ಸಂಬಂಧ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಬಹುದು.

24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 2266 0000, ಎಸ್ಎಂಎಸ್ ಸಂದೇಶಕಳುಹಿಸಬಹುದಾದ ಮೊಬೈಲ್ ಸಂಖ್ಯೆ 94818 44444, ಆನ್ ಲೈನ್ ಮೂಲಕ ದೂರು ನೀಡಬೇಕಾದ ವೆಬ್ ಸೈಟ್ ವಿಳಾಸ www.spandana.kar.nic.in

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X