ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದತ್ತ ಪಾದುಕೆಗೆ ಡಿ.1ರಂದು ಪೂಜೆ

By Staff
|
Google Oneindia Kannada News

Dattapeeta
ಕೋಲಾರ, ನ. 19 : ಚಿಕ್ಕಮಂಗಳೂರಿನ ದತ್ತ ಪೀಠಕ್ಕೆ ಡಿ. 1 ರಂದು ರಾಜ್ಯದ ಎಲ್ಲೆಡೆಯಿಂದ 30 ಸಾವಿರ ಮಂದಿ ಮಾಲೆಧಾರಣೆಯೊಂದಿಗೆ ಆಗಮಿಸಿ ದತ್ತ ಪಾದುಕೆಗೆ ಪೂಜೆ ಸಲ್ಲಿಸಲಿದ್ದಾರೆ ಎಂದು ಭಜರಂಗದಳದ ಪ್ರಾಂತೀಯ ಸಂಚಾಲಕ ಸೂರ್ಯನಾರಾಯಣ ತಿಳಿಸಿದರು.

ನಗರ ಬಸ್ ನಿಲ್ದಾಣ ವೃತ್ತದಲ್ಲಿ ಅಂತರಗಂಗೆಗೆ ಭಜರಂಗದಳ ಏರ್ಪಡಿಸಿದ್ದ ಉಚಿತ ಬಸ್ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುವಕರಲ್ಲಿ ಧಾರ್ಮಿಕ ಜಗೃತಿ ಮೂಡಿಸಿ ಸಂಘಟಿಸುವ ಕೆಲಸವನ್ನು ಭಜರಂಗದಳ ಮಾಡುತ್ತಿದೆ. ಧರ್ಮ ಉಳಿದರೆ ನಾವು ಉಳಿಯುತ್ತೇವೆ ಎಂಬ ಸತ್ಯವನ್ನು ಅರಿಯಬೇಕಿದೆ ಎಂದವರು ತಿಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿಯಾಗಿರುವ ಶತಶೃಂಗ ಪರ್ವತದ ಸಾಲಿನಲ್ಲಿರುವ ಅಂತರಗಂಗೆ ಪುಣ್ಯ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬರುತ್ತಿದ್ದು, ಇವರಿಗಾಗಿ ಭಜರಂಗದಳ ಜಿಲ್ಲಾ ಶಾಖೆ ಉಚಿತ ಬಸ್ ಸೇವೆ ಮತ್ತು ಉಪವಾಸ ವ್ರತ ಆಚರಿಸಿ ಬರುವವರಿಗೆ ಪ್ರಸಾದ ವಿತರಣೆ ಕಾರ್ಯ ನಡೆಸಿರುವುದು ಸಂತಸ ತಂದಿದೆ ಎಂದರು.

ಭಜರಂಗದಳದ ಜಿಲ್ಲಾ ಮುಖಂಡ ಡಿ.ಆರ್. ನಾಗರಾಜ್ ಮಾತನಾಡಿ, ಹಿಂದೂ ಬಾಂಧವರಲ್ಲಿ ಭಕ್ತಿ, ಶ್ರದ್ದೆ ಉಂಟುಮಾಡುವ ಈ ಪವಿತ್ರ ಕ್ಷೇತ್ರದಲ್ಲಿ 10 ವರ್ಷಗಳಿಂದ ಸಂಘಟನೆ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದಾಗಿ ಹೇಳಿದರು. ಮುಖಂಡರಾದ ಸತ್ಯಶಂಕರ್, ಭಜರಂಗದಳದ ಬಾಲಾಜಿ, ಅಪ್ಪಿ, ನಂದೀಶ್, ಮುಕುಂದ, ಬಾಬು, ಆನಂದ್, ಸುಗಟೂರು ಚಲಪತಿ ಮತ್ತಿತರರು ಹಾಜರಿದ್ದರು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X