ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಮಾತರಂ ವಿವಾದವೊಂದು ಸಂಚು

By Staff
|
Google Oneindia Kannada News

Bankimchandra
ಬೆಂಗಳೂರು, ನ. 18 : ವಂದೇ ಮಾತರಂ ಅನ್ನು ನೆಪವಾಗಿಟ್ಟುಕೊಂಡು ಹಿಂದೂ ಮುಸ್ಲಿಂ ಸಮಾಜ ಬಾಂಧವರ ನಡುವೆ ಘರ್ಷಣೆ ಹುಟ್ಟುಹಾಕಲು ಯತ್ನಿಸಲಾಗುತ್ತಿದೆ ಎಂದು ಅಂಜುಮನ್ ಫನ್ ಕಾರಾನೆ ಉರ್ದು ಸಂಸ್ಥೆಯ ಕಾರ್ಯದರ್ಶಿ ಶರ್ಯಾರ್ ಖಾನ್ ಹೇಳಿದರು.

ಹಿಂದೂ ಬಾಂಧವರು ಫತ್ವಾದ ಅರ್ಥವನ್ನು ಹಾಗೂ ಮುಸ್ಲಿಮರು ಬಾಂಧವರು ವಂದೇ ಮಾತರಂ ಗೀತೆಯ ಅರ್ಥವನ್ನು ಮನಗಂಡರೆ ಈ ಕುರಿತು ವಿವಾದವೇ ಹುಟ್ಟುವುದಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಫತ್ವಾ ಎನ್ನುವುದು ಒಂದು ಆದೇಶವಲ್ಲ. ಅದೊಂದು ಉಪದೇಶ. ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ ನಂಬಿಕೆಯನ್ನು ಪ್ರಶ್ನಿಸುವ ಸಾಲುಗಳಿರುವುದು ಸತ್ಯ. ಆದನ್ನು ಮುಸ್ಲಿಂಮರು ಹಾಡದಿರುವುದು ಒಳ್ಳೆಯದು ಎಂದು ಫತ್ವಾದಲ್ಲಿ ಹೇಳಲಾಗಿದೆ.

ಮುಸ್ಲಿಮರು ವಂದೇ ಮಾತರಂ ಗೀತೆಯನ್ನು ಹಾಡಲೇಬಾರದು ಎಂದು ಯಾವುದೇ ನಿರ್ಬಂಧವಿಲ್ಲ. ಇಷ್ಟ ಇರುವವರು ಹಾಡಬಹುದು ಎಂದು ಅವರು ವಿವರಿಸಿದರು.
ಇಂತಹ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡಿ ಹಿಂದೂ ಮುಸ್ಲಿಂ ಬಾಂಧವರ ನಡುವೆ ವೈಮನಸ್ಸು ತರುವ ಪ್ರಯತ್ನವನ್ನು ಕೈಬಿಡಬೇಕು. ಇದು ದೇಶವನ್ನು ಒಡೆಯುವ ರಾಜಕೀಯ ಹೊರತು ಬೇರೇನೂ ಅಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X