ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ, ಹೆಗ್ಡೆ

By Staff
|
Google Oneindia Kannada News

Santhosh Hegde
ಬೆಂಗಳೂರು, ನ. 18 : ನೆರೆ ಸಂತ್ರಸ್ತರಿಗಾಗಿ ನಡೆಸುತ್ತಿರುವ ಪರಿಹಾರ ಕಾರ್ಯಕ್ರಮಗಳು ಲೋಪದೋಷದಿಂದ ಕೂಡಿದ್ದು, ನೊಂದವರಿಗೆ ನೆರವಾಗುವ ಕೆಲಸ ಸಂಪರ್ಕಕವಾಗಿ ನಡೆಯುತ್ತಿಲ್ಲ ಎಂಬ ಲೋಕಾಯುಕ್ತರ ವರದಿ ಸರಕಾರದ ಕೈಸೇರಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಾಯುಕ್ತ ಸಂತೋಷ ಹೆಗ್ಡೆ ಸಂತ್ರಸ್ತರಿಗೆ ಸಕಾಲದಲ್ಲಿ ನೆರವಾಗಿ ಎಂದು ತಾಕೀತು ಮಾಡಿದ್ದಾರೆ.

ಮರುವಸತಿ ಯೋಜನೆಗೆ ಕಾಲಮಿತಿ ನಿಗದಿಪಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಾಯುಕ್ತರು, ಇದು ಅನುದಾನದ ದುರ್ಬಳಿಕೆಗೆ ದಾರಿ ಮಾಡಿಕೊಡುತ್ತಿದೆ. ಮನೆ ನಿರ್ಮಿಸುವಾಗ ಗುಣಮಟ್ಟಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಂದು ಮನೆ ನಿರ್ಮಾಣಕ್ಕೆ ವೈಜ್ಞಾನಿಕವಾಗಿ ಕಾಲ ನಿಗದಿ ಮಾಡುವ ಜತೆಗೆ ಹಂಚಿಕೆಯಲ್ಲಿ ಅಪವ್ಯಯವಾಗುವುದನ್ನು ತಡೆಯುವಂತೆ ಸೂಚಿಸಿದ್ದಾರೆ.

ಲೋಕಾಯುಕ್ತರು ಕಂಡುಕೊಂಡಿರುವ ಲೋಪದೋಷಗಳು ಕೆಳಗಿನಂತಿವೆ.

ನೆರೆ ಪರಿಹಾರ ಕಾರ್ಯಕ್ರಮಗಳ ಉಸ್ತುವಾರಿಗೆ ನೇಮಿಸಿರುವ ಜಿಲ್ಲಾ ನೋಡಲ್ ಅಧಿಕಾರಿಗಳ ನಿರಾಸಕ್ತಿ. ಕೆಲ ಜಿಲ್ಲೆಗಳಲ್ಲಿ ನಡೆಯುತ್ತಿರುವ ನೆರೆ ಕಾಮಗಾರಿಗೆ ತಾಂತ್ರಿಕ ಅನುಮತಿ ದೊರೆತಿಲ್ಲ. ಇದರಿಂದ ಗುಣಮಟ್ಟ ಕಳಪೆಯಾಗಲಿದೆ. ಪರಿಹಾರ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರಂಭವಾಗಿದ್ದು, ನಿಜವಾದ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ವಿತರಿಸುವ ಪರಿಹಾರ ಚೆಕ್ ಗಳಿಗೆ ಸಂಬಂಧಪಟ್ಟ ಬ್ಯಾಂಕ್ ನಿಂದ ಮಾನ್ಯತೆ ಇಲ್ಲ. ಬೆಳೆ ಹಾನಿ ಸಮರ್ಪಕವಾಗಿ ವಿತರಿಸುತ್ತಿಲ್ಲ ಸೇರಿದಂತೆ ಅನೇಕ ದೋಷಗಳನ್ನು ಪಟ್ಟಿ ಮಾಡಿ ಲೋಕಾಯುಕ್ತರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X