• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗದೀಶ್ ಶೆಟ್ಟರ್ ಗೆ ಗ್ರಾಮೀಣಾಭಿವೃದ್ಧಿ ಖಾತೆ

By Staff
|

ಬೆಂಗಳೂರು, ನ.16:ಶೋಭಾ ಕರಂದ್ಲಾಜೆ ಅವರಿಂದ ತೆರವಾಗಿರುವ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆ ನೂತನ ಸಂಪುಟ ದರ್ಜೆ ಸಚಿವ ಜಗದೀಶ್ ಶೆಟ್ಟರ್ ಅವರ ಪಾಲಾಗುವ ಸಾಧ್ಯತೆಗಳು ನಿಚ್ಚಳ ವಾಗಿದೆ. ಬಿಜೆಪಿ ಸಮನ್ವಯ ಸಮಿತಿ ರಚನೆ ನಂತರ ಅಧಿಕೃತವಾಗಿ ಸುದ್ದಿ ಹೊರಬೀಳಲಿದೆ.

ಗ್ರಾಮೀಣಾಭಿವೃದ್ಧಿ, ಬೃಹತ್ ಕೈಗಾರಿಕೆ, ವಸತಿ, ಲೋಕೋಪಯೋಗಿ ಖಾತೆ ಸಿಗುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಅಂತಿಮವಾಗಿ ಶೋಭಾ ಹೊಂದಿದ್ದ ಖಾತೆಯನ್ನು ಶೆಟ್ಟರ್ ಅವರಿಗೆ ನೀಡಲಾಗಿದೆ. ಇಂದು ಬೆಳಗ್ಗೆ 11.40 ರ ಸುಮಾರಿಗೆ ರಾಜಭವನದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಶೆಟ್ಟರ್ ಸಚಿವರಾದರು.

ಸಮನ್ವಯ ಸಮಿತಿ ರಚನೆ ಕಸರತ್ತು

ರೆಡ್ಡಿ ಬಳಗ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದರೆ, ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಆರೆಸ್ಸೆಸ್ ನ ಪ್ರಮುಖ ನಾಯಕರು ಬೀಡುಬಿಟ್ಟಿದ್ದಾರೆ. ಈ ನಡುವೆ ಒಂದು ಸಣ್ಣ ಸಭೆ ನಡೆಸಿ ಸುದ್ದಿಗಾರರೊಡನೆ ಮಾತನಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅನೇಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ದುಃಖ ತೊಡಿಕೊಂಡರು.

ಸಮನ್ವಯ ಸಮಿತಿ ನಾಳೆ ರಚನೆಯಾಗುವುದು ಬಹುತೇಕ ಖಚಿತವಾಗಿದೆ.ಯಡಿಯೂರಪ್ಪ, ಕರುಣಾಕರರೆಡ್ಡಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಆರೆಸ್ಸೆಸ್ ನ ಜಿ ಸಂತೋಷ್ ಹಾಗೂ ಸತೀಶ್ ಅವರು ಈ ಹಂತದಲ್ಲಿ ಸಮಿತಿಯಲ್ಲಿ ಹೆಸರಿಸಬಹುದಾದ ಹಿರಿಯ ನಾಯಕರು .ಆರ್ ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕೂಡ ಸಮಿತಿಯಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X