ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣುಸ್ಥಾವರದ ಮೇಲೆ ದಾಳಿ ಭೀತಿ, ಕಟ್ಟೆಚ್ಚರ

By Staff
|
Google Oneindia Kannada News

Kaiga Nuclear Power Plant
ನವದೆಹಲಿ, ನ.17: ಮುನ್ನೆಚ್ಚರಿಕೆ ಕ್ರಮವಾಗಿ ಅಣು ಸ್ಥಾವರ ಹೊಂದಿರುವ ಎಲ್ಲ ರಾಜ್ಯಗಳಿಗೂ ಅಣು ಘಟಕಗಳ ಸುತ್ತ ಸರ್ಪಗಾವಲು ಹಾಕುವಂತೆ ಗೃಹ ಸಚಿವಾಲಯ ಸೂಚಿಸಿದೆ. ಅಣುಸ್ಥಾವರಗಳಂತಹ ಆಯಕಟ್ಟಿನ ನಿರ್ಮಾಣಗಳಿಗೆ ಯಾವುದೇ ಹಾನಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಮೇಲಿನ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿರುವ ಡೇವಿಡ್ ಹೆಡ್ಲಿ ದೇಶದ ಮಹತ್ವದ ಅಣುಸ್ಥಾವರಗಳು ಇರುವ ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಿಗೆ ಭೇಟಿ ನೀಡಿದ್ದ. ದೇಶದ ಪ್ರಮುಖ ಆರು ಅಣು ಸ್ಥಾವರಗಳಾದ ಉತ್ತರ ಪ್ರದೇಶದ ನರೋರಾ, ಕರ್ನಾಟಕದ ಕೈಗಾ, ಮಹಾರಾಷ್ಟ್ರದ ತಾರಾಪುರ, ತಮಿಳುನಾಡಿನ ಕಲ್ಪಾಕಂ, ಗುಜರಾತ್‌ನ ಕಕ್ರಾಪಾರ್, ರಾಜಸ್ತಾನದ ಕೋಟಾ ಮತ್ತು ಟ್ರಾಂಬೆಯಲ್ಲಿರುವ ಭಾಭಾ ಪರಮಾಣು ಸಂಶೋಧನಾ ಸಂಸ್ಥೆ ಸೇರಿದಂತೆ ಅಣು ಘಟಕಗಳ ಸುತ್ತ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರಕಾರಗಳಿಗೆ ಆದೇಶ ನೀಡಿದೆ.

ಈ ಮಧ್ಯೆ ಲಷ್ಕರ್ ಉಗ್ರನೆಂದು ಶಂಕಿಸಲಾದ ಡೇವಿಡ್ ಹೆಡ್ಲಿ ಜತೆ ಸಂಪರ್ಕಕ್ಕೆ ಬಂದ ಬಾಲಿವುಡ್ ಚಿತ್ರ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್‌ಗೆ ಮುಂಬೈ ಬಿಟ್ಟು ತೆರಳದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೂಚಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X