ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸರ್ಗಿಕ ವಿಪತ್ತು ನಿರ್ವಹಣೆಗೆ ಸರ್ವೆ ಸ್ಟೇಶನ್

By Staff
|
Google Oneindia Kannada News

ಬೆಳಗಾವಿ,ನ.17: ಪ್ರವಾಹ, ಅತೀವೃಷ್ಟಿ ಹಾಗೂ ಇತರೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ತುರ್ತು ಸೇವೆ ಕಲ್ಪಿಸಲು ಅನುಕೂಲವಾಗುವಂತೆ ಪರಿಹಾರ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ "ವೈಯರ್‌ಲೆಸ್" ಸೌಲಭ್ಯವನ್ನು ಕಲ್ಪಿಸಲಾಗುವದೆಂದು ರಾಜ್ಯದ ಕಂದಾಯ ಖಾತೆ ಸಚಿವ ಜಿ.ಕರುಣಾಕರ ರೆಡ್ಡಿ ಅವರು ಹೇಳಿದರು.

ಅಥಣಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಪ್ರಕೃತಿವಿಕೋಪ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ತುರ್ತು ಸೇವೆ ಕಲ್ಪಿಸುವ ಅಗತ್ಯವಿದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಇಂತಹ "ವೈಯರ್‌ಲೆಸ್" ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಅದರಂತೆ ಅಕಾಲಿಕವಾಗಿ ಬರುವ ಆಪತ್ತನ್ನು ನಿರ್ವಹಿಸಲು ಮತ್ತು ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ಪರಿಹಾರ ದೊರೆಯಲು ಪ್ರತಿ ತಾಲೂಕಿನಲ್ಲಿ ಉನ್ನತ ತಂತ್ರಜ್ಞಾನವುಳ್ಳ "ಸರ್ವೆ ಸ್ಟೇಶನ್" ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಪರಿಹಾರಕ್ಕೆ ಸಂಬಂಧಪಟ್ಟಂತೆ ತುರ್ತು ಸೇವೆ ದೊರೆಯುವ ಜೊತೆಗೆ ಗಣಕಯಂತ್ರದಲ್ಲಿ ತಕ್ಷಣ ಪರಿಹಾರ ಮಾಹಿತಿ ನಮೂದಾಗುವ ಮೂಲಕ ಜನರಿಗೆ ತಕ್ಷಣ ಪರಿಹಾರ ದೊರೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.ಸಚಿವರ ಜಿಲ್ಲಾ ಪ್ರವಾಸದ ಮುಖ್ಯಾಂಶಗಳು:

*ಪಹಣಿ ಪತ್ರಿಕೆ ತಿದ್ದುಪಡಿಯನ್ನು ಸರಳಿಕರಣಕ್ಕೆ ಕ್ರಮ. ಪಟ್ಟಣ ಸರ್ವೆ ಕಾರ್ಯದ ಸುಧಾರಣೆ.
*ನೆರೆ ಸಂತ್ರಸ್ತ ಪ್ರದೇಶದಲ್ಲಿ ಒಟ್ಟು 3 ಲಕ್ಷ ಮನೆಗಳ ನಿರ್ಮಾಣ. ಇಂದಿರಾ ಆವಾಸ ಯೋಜನೆ ಹಾಗೂ ರಾಜ್ಯ ಸರ್ಕಾರದಿಂದ ಜಂಟಿಯಾಗಿ ಮನೆ ನಿರ್ಮಾಣ.
*ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬಾಗಲಕೋಟ, ವಿಜಾಪೂರ ಹಾಗೂ ಬೆಳಗಾವಿಯಲ್ಲಿ ಸಂತ್ರಸ್ತರಿಗಾಗಿ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ.
*ಸೋಮವಾರ ಬಡಚಿ ಗ್ರಾಮದಲ್ಲಿ ಪರಿಹಾರ ಕಾರ್ಯದ ಬಗ್ಗೆ ಪರಿಶೀಲನೆ ನಂತರ ನವಲಿಹಾಳ, ಐನಾಪೂರ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ವೀಕ್ಷಣೆ ನಡೆಸಿದರು. ಐಗಳಿಯಲ್ಲಿ ಮಲ್ಟಿವಿಲೇಜ್ ಯೋಜನೆ ಬಗ್ಗೆ ಪರಿಶೀಲನೆ ಮಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X