ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಸಾವಿರ ಟೆಸ್ಟ್ ರನ್ ಕ್ಲಬ್ ಸೇರಿದ ದ್ರಾವಿಡ್

By Staff
|
Google Oneindia Kannada News

Rahul Dravid
ಅಹಮದಾಬಾದ್, ನ.16: ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ನಾಯಕ ಧೋನಿ, ಯುವರಾಜ್ ಅವರ ಸಮಯೋಚಿತ ಆಟದ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಟೆಸ್ಟ್ ಜೀವನದಲ್ಲಿ 11ಸಾವಿರ ರನ್ ಗಳನ್ನು ಪೂರೈಸಿ ದಾಖಲೆ ಮೆರೆದ ದ್ರಾವಿಡ್ ದಿನದಾಟದ ಅಂತ್ಯಕ್ಕೆ 177 ರನ್ (27ನೇ ಶತಕ)ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಟೆಸ್ಟ್ ಆಟಗಾರರಾಗಿ 20 ವರ್ಷದ ಅನುಭವವುಳ್ಳ ಸಚಿನ್ 12,777 ರನ್ ಗಳೊಂದಿಗೆ ಮುಂದಿದ್ದಾರೆ. ದ್ರಾವಿಡ್ ಜೊತೆ ಇಂದು ಶತಕ ಗಳಿಸಿದ ಧೋನಿ(110 ರನ್),ದಿನದ ಕೊನೆಗೆ ಎಚ್ಚರ ತಪ್ಪಿ ಆಡಿ ಔಟಾದರು. ಇದಕ್ಕೂ ಮುನ್ನ ಅವರು ಟೆಸ್ಟ್ ಜೀವನದಲ್ಲಿ 2 ಸಾವಿರ ರನ್ ಗಳನ್ನು ಪೂರೈಸಿದರು. ದಿನದ ಅಂತ್ಯಕ್ಕೆ ಭಾರತದ ಮೊತ್ತ 385 ಕ್ಕೆ 6. ಹರ್ಭಜನ್ ಸಿಂಗ್ 2 ರನ್ ಗಳಿಸಿ ಆಡುತ್ತಿದ್ದಾರೆ. ಯುವರಾಜ್ ಸಿಂಗ್ 68 ರನ್ ಗಳಿಸಿ ದ್ರಾವಿಡ್ ಗೆ ಉತ್ತಮ ಜತೆಯಾಟ ಮೆರೆದರು.

ದಿನದ ಆರಂಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತ್ವರಿತ ಗತಿಯಲ್ಲಿ ವಿಕೆಟ್ ಗಳನ್ನು ಕಳೆದು ಕೊಂಡು ಸಂಕಷ್ಟ ಸ್ಥಿತಿಯಲ್ಲಿತ್ತು. ಶ್ರೀಲಂಕಾದ ಎಡಗೈ ವೇಗದ ಬೌಲರ್ ವೆಲೆಗೆಡೆರಾ ಅವರು ಗಂಭೀರ್, ಸೆಹ್ವಾಗ್ ಹಾಗೂ ಸಚಿನ್ ಅವರನ್ನು ಪೆವಿಲಿಯನ್ ಗೆ ಕಳಿಸಿದ ಮೇಲೆ, ಭರವಸೆ ಆಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಶೂನ್ಯ ಸಂಪಾದನೆಯೊಂದಿಗೆ ಲಂಕಾ ಬೌಲರ್ ಪ್ರಸಾದ್ ಗೆ ವಿಕೆಟ್ ಒಪ್ಪಿಸಿದರು. ನಂತರ ಯುವರಾಜ್ -ದ್ರಾವಿಡ್ ಜತೆಯಾಟದ125 ರನ್ ಗಳು ಹಾಗೂ ದ್ರಾವಿಡ್-ಧೋನಿ ಜತೆಯಾಟದ 224 ರನ್ ಗಳು ಭಾರತಕ್ಕೆ ಚೇತರಿಕೆ ನೀಡಿತು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X