ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿನಾಡಿನಲ್ಲಿ ಎಚ್ಡಿಕೆ ವಿರುದ್ಧ ಸಿಎಂ ಗರಂ

|
Google Oneindia Kannada News

HDK and Yeddyurappa
ಬೆಳಗಾವಿ, ನ. 14: ಬಿಜೆಪಿ ಹಿರಿಯ ಸಚಿವರಿಂದ ಎಚ್ಡಿಕೆ ಭೇಟಿ ಎಂಬ ವರದಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಅದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಕುಮಾರಸ್ವಾಮಿ ಅವರ ಮಾತು ನಂಬಲರ್ಹವಲ್ಲ ಎಂದರು. ತಮ್ಮನ್ನು 'ಅಶಕ್ತ ಸಿಎಂ' ಎಂದು ಜರಿದಿರುವ ಸಿದ್ದರಾಮಯ್ಯ ಅವರ ಮಾತಿಗೆ ಬೇಸರಿಸದೆ , ಅದು ಅವರು ನೀಡಿದ ಸರ್ಟಿಫಿಕೇಟ್ ಎಂದು ಭಾವಿಸುವೆ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡುವೆ ಎಂದರು.

ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ವರ್ಗಾವಣೆ ಕೆಲವೊಮ್ಮೆ ಅನಿವಾರ್ಯ ಹಾಗೂ ಅವಶ್ಯಕವಾಗುತ್ತದೆ, ಆದರೆ ಇನ್ಮುಂದೆ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲ ಎಂದರು. ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಆಗಮಿಸಿದ್ದಾರೆ.

ಅಧಿಕಾರಿಗಳ ಕಾರ್ಯವೈಖರಿ ತೃಪ್ತಿ ತಂದಿದೆ. ಸುಮಾರು 300 ಗ್ರಾಮಗಳಲ್ಲಿ ಶೀಘ್ರದಲ್ಲೇ ಹೊಸ ಲೇಔಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ. ನಾಡಿನ ಮಠಮಾನ್ಯಗಳಿಗೆ, ಉದ್ಯಮಿಗಳಿಗೆ ಎಲ್ಲಾ ಸಾರ್ವಜನಿಕರಿಗೆ ಅಭಿನಂದಿಸುತ್ತೇನೆ.ದೇಣಿಗೆ ಸಂಗ್ರಹ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೂಡ ತೃಪ್ತಿ ವ್ಯಕ್ತಪಡಿಸಿದೆ . ನೆರೆ ಪರಿಹಾರ ಕಾರ್ಯ ನೂರಕ್ಕೆ ಶೇ.90 ಭಾಗ ನೆರೆ ಪರಿಹಾರ ಕಾರ್ಯ ಆರಂಭವಾಗಿದೆ ಎಂದರು.

ಗರಂ ಆದ ಪ್ರಫುಲ್ ಪಟೇಲ್
ಬೆಳಗಾವಿಯಲ್ಲಿ ಇನ್ನು ಮೂರು ತಿಂಗಳಲ್ಲಿ ವಿಮಾನಯಾನ ಆರಂಭವಾಗಲಿದೆ ಎಂದ ಕೇಂದ್ರ ನಾಗರೀಕ ವಿಮಾನಯಾನ ಸಚಿವರು, ಈ ಕಾಮಗಾರಿಯಲ್ಲಿ ವಿಳಂಬ ಏಕೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಹೇಳಿದಷ್ಟನ್ನು ಬರೆದುಕೊಂಡು ಹೋಗಿ, ಸುಮ್ಮನೆ ಕಿರಿಕಿರಿ ಮಾಡುವ ನಿಮ್ಮಂಥ ಪತ್ರಕರ್ತರನ್ನು ಬಹಳ ನೋಡಿದ್ದೀನಿ ಎಂದು ಸಿಟ್ಟಾದ ಘಟನೆ ನಡೆದಿದೆ.

ಮಳೆ ನಿಂತರೂ ಮರದ ಹನಿ ನಿಲ್ಲದು
ಬಿಜೆಪಿ ಹಿರಿಯ ನಾಯಕರು ನನ್ನನ್ನು ಭೇಟಿ ಮಾಡಿರುವುದು ನಿಜ. ಇದು ವೈಯಕ್ತಿಕ ನೆಲೆಯಲ್ಲಿ ಆಗಿರುವುದು. ಅನೌಪಚಾರಿಕ ಭೇಟಿ ಅಷ್ಟೆ. ಸರ್ಕಾರ ರಚನೆ, ಬಿಜೆಪಿ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಬಿಕ್ಕಟ್ಟು ಪರಿಹಾರವಾಗಿದೆ ಎಂದು ಬಹಿರಂಗವಾದರೂ ಅಂತರಂಗದಲ್ಲಿ ಆಂತರಿಕವಾಗಿ ಭಿನ್ನಮತ ಜಾರಿಯಲ್ಲಿದೆ ಎಂದು ಪ್ರತಿಪಕ್ಷಗಳು ಸಾರಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X