ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳು ಮನುಷ್ಯರಾಗಬೇಕು, ಸಿದ್ಧಗಂಗಾ ಶ್ರೀ

|
Google Oneindia Kannada News

Siddaganga seer
ತುಮಕೂರು, ನ. 13 : ಭೀಕರ ಮಳೆಯಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜನತೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸಂದರ್ಭದಲ್ಲಿ ಆಡಳಿತ ನಡೆಸುವವರು ಎರಡು ಪಕ್ಷಗಳಾಗಿ ಹೈದರಾಬಾದ್ ಗೋ ಇನ್ನೆಲ್ಲಿಗೋ ಹೋಗುವುದು ಇದ್ಯಾವ ಧರ್ಮ, ಇದೇನಾ ನಮ್ಮ ಸಂಸ್ಕೃತಿ. ಮನುಷ್ಯ ಮೊದಲು ಮಾನವನಾಗಿ ಬದುಕುವುದನ್ನು ಕಲಿತು ಕೊಳ್ಳಬೇಕು ಎಂದು ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಮಾಹಾಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಸಮಾಜದಲ್ಲಿ ಇಂದು ನೈತಿಕ ಅಧಃಪತನ ಕಾಣುತ್ತಿದೆ. ಮನುಷ್ಯ ಹಣ, ಆಸ್ತಿ, ಅಧಿಕಾರದ ಗುಲಾಮನಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ನವಸಮಾಜ ನಿರ್ಮಾಣ ಮಾಡಲು ಯುವಕರು ಮುಂದೆ ಬರಬೇಕು. ಬುದ್ದ, ಬಸವಣ್ಣ ಮುಂತಾದ ಮಹಾನುಭಾವರ ಕೊಡುಗೆ ಎಲ್ಲ ಕಾಲಕ್ಕೂ ಬೇಕಾಗಿದೆ. ಅಜ್ಞಾನ, ದಾರಿದ್ರ್ಯ ದೂರವಾಗಬೇಕು. ಇಂದು ಮಾನವ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ ಎಂದು ಸಿದ್ದಗಂಗಾ ಶ್ರೀಗಳು ಹೇಳಿಕೆ ನೀಡಿದ್ದಾರೆ.

ನಗರದ ಬಣ್ಣದ ಮಠದಲ್ಲಿ ಗುರುವಾರ (ನ 12 ) ಬಸವತತ್ವ ಮತ್ತು ಚಿಂತನಾಗೋಷ್ಟಿಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪ್ರಪಂಚ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದೆ. ಆದರೆ ಆಂತರಿಕ ಜೀವನದಲ್ಲಿ ಇನ್ನು ಪ್ರಗತಿಯಾಗಿಲ್ಲ. ಉಗ್ರವಾದಿ ಚಟುವಟಿಕೆ ಮತ್ತು ಯುದ್ದದಿಂದ ಅಶಾಂತಿ ತಲೆದೋರಿದೆ. ಇದೆಲ್ಲಾ ಹೋಗಿ ಭೀತಿ ರಹಿತ ಆದರ್ಶ ಸಮಾಜ ನಿರ್ಮಾಣವಾಗಬೇಕೆಂದು ಸಿದ್ದಗಂಗಾ ಶ್ರೀಗಳು ಆಶಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X