ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರ ಮೇಲೆ ವಕೀಲರ ಪುಂಡಾಟಿಕೆ

|
Google Oneindia Kannada News

Suresh Kumar
ಬೆಂಗಳೂರು, ನ. 9 : ನ್ಯಾಯಕರನ್ ದಿನಕರನ್ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ವಕೀಲರ ಸಂಘ ನಡೆಸಿದ ಬಹಿಷ್ಕಾರ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ವಕೀಲರ ಗುಂಪೊಂದು ಪುಂಡಾಟಿಕೆ ನಡೆಸಿದ ಘಟನೆಯನ್ನು ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಸುರೇಶಕುಮಾರ್ ಬಲವಾಗಿ ಖಂಡಿಸಿದ್ದಾರೆ. ವಕೀಲರ ಅನಾಗರಿಕ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಆರೋಪ ಹೊತ್ತಿದ್ದು, ಅವರು ಯಾವ ಕಾರಣಕ್ಕೂ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ವಕೀಲರ ಸಂಘ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಇದನ್ನು ವರದಿ ಮಾಡಲು ತೆರಳದಿದ್ದ ಪತ್ರಕರ್ತರ ಮೇಲೆ ವಕೀಲರ ಗುಂಪೊಂದು ದಾಳಿ ನಡೆಸಿದೆ. ಅಲ್ಲದೇ ಸಿಎನ್ಎನ್ ಐಬಿಎನ್ ಕ್ಯಾಮರಾಮನ್ ಮೋಹನ್ ಎಂಬುವವರ ಮೇಲೆ ಹದಿನೈದು ಇಪ್ಪತ್ತು ವಕೀಲರ ಏಕಕಾಲದಲ್ಲಿ ದಾಳಿ ನಡೆಸಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಕೀಲರು ಪತ್ರಕರ್ತರ ಮೇಲೆ ಮೂರನೇ ಬಾರಿ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ.

ತಕ್ಷಣ ಪ್ರತಿಭಟನೆ ಆರಂಭಿಸಿದ ಪತ್ರಕರ್ತರು, ಸಚಿವ ಸುರೇಶಕುಮಾರ್ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಆಗ ಸ್ಥಳಕ್ಕೆ ದೌಡಾಯಿಸಿದ ಸುರೇಶಕುಮಾರ್, ದಾಳಿ ನಡೆಸಿದ ವಕೀಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅನಾಗರಿಕ ವರ್ತನೆ. ದಾಳಿ ನಡೆಸಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಅಲ್ಲದೇ ಬಾರ್ ಅಸೋಸಿಯಷನ್ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಬಾರ್ ಅಸೋಸಿಯೇಷನ್ ನ ಪುಟ್ಟೇಗೌಡ ಅವರು, ಪತ್ರಕರ್ತರ ಕ್ಷಮೆಯಾಚಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X