ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರನ್ ವಿವಾದ : ಕೋರ್ಟ್ ಆವರಣದಲ್ಲಿ ಮಾರಾಮಾರಿ

|
Google Oneindia Kannada News

PD Dinakaran
ಬೆಂಗಳೂರು, ನ. 9 : ಆಡಳಿತರೂಢ ಬಿಜೆಪಿಯಲ್ಲಿ ಬಿರುಗಾಳಿಯಂತೆ ಎದ್ದಿದ್ದ ಭಿನ್ನಮತ ತಾತ್ಕಾಲಿಕವಾಗಿ ಶಮನವಾಗಿದ್ದರೂ, ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ತಾರಕ್ಕೇರಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಕಲಾಪಗಳಲ್ಲಿ ಭಾಗವಹಿಸಿರುವುದಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧಿ ವಕೀಲರ ನಡುವೆ ಕೋರ್ಟ್ ಆವಣದಲ್ಲಿ ವಾಗ್ವಾದ, ಮಾರಾಮಾರಿ ನಡೆದಿರುವ ಘಟನೆ ಸೋಮವಾರ ನಡೆದಿದೆ. ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದ್ದು, ಸಿಎನ್ಎನ್ ಐಬಿಎನ್ ಕ್ಯಾಮರಾಮನ್ ಗಾಯಗೊಂಡಿದ್ದಾರೆ.

ದಿನಕರನ್ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರಲು ನಗರದ ಎಲ್ಲಾ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸುವ ಬೆಂಗಳೂರು ವಕೀಲರ ಸಂಘದ ನಿರ್ಣಯಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದರೂ, ಕಲಾಪ ಬಹಿಷ್ಕಾರಕ್ಕೆ ಮುಂದಾದ ವಕೀಲರಿಗೂ ಮತ್ತು ದಿನಕರನ್ ಪರ ವಕೀಲರಿಗೂ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ವಕೀಲರಿಗೆ ಗಾಯಗಳಾಗಿವೆ.

ದಿನಕರನ್ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿದೆ, ಅವರ ವಿರುದ್ಧದ ಅಂತಿಮವಾಗಿ ಹೊರಬರುವವರೆಗೂ ಅವರು ಕಲಾಪ ನಡೆಸುವುದರಲ್ಲಿ ತಪ್ಪೇನಿದೆ ಎಂದು ದಿನಕರನ್ ಪರ ವಕೀಲರ ವಾದವಾದರೆ, ಭ್ರಷ್ಟಾತಾರ ಆರೋಪ ಹೊತ್ತಿರುವ ನ್ಯಾಯಮೂರ್ತಿಗಳು ಕಳಂಕ ಮುಕ್ತರಾಗುವವರೆಗೂ ಕಲಾಪಗಳಲ್ಲಿ ಭಾಗವಹಿಸಬಾರದು ಎಂದು ವಕೀಲರ ಸಂಘದ ಒತ್ತಾಯವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X