ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್.ನಿಜಲಿಂಗಪ್ಪ 'ಕರ್ನಾಟಕ ರತ್ನ' ಪ್ರಶಸ್ತಿ ಕಳುವು

|
Google Oneindia Kannada News

S Nijalingappa's Karnataka Ratna award stolen
ಚಿತ್ರದುರ್ಗ, ನ.7: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರಚಿತ್ರದುರ್ಗದ ಮನೆಯಲ್ಲಿ ಕಳುವಾಗಿದ್ದು ಕರ್ನಾಟಕ ರತ್ನ(1999), ನಾಡೋಜ, ಕರ್ನಾಟಕ ಕುಲರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆ ಶುಕ್ರವಾರ (ನ.6) ರಾತ್ರಿ ನಡೆದಿದೆ.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಪ್ರಶಸ್ತಿಗಳನ್ನು ಯಾರೇ ಕದ್ದಿರಬಹುದು ಅವರು 12 ಗಂಟೆಗಳ ಒಳಗೆ ಪ್ರಶಸ್ತಿಗಳನ್ನು ಹಿಂದಿರುಗಿಸುವಂತೆ ಮಾಧ್ಯಮಗಳ ಮೂಲಕ ಎಚ್ಚರಿಸಿದ್ದಾರೆ. ಇಲ್ಲದಿದ್ದರೆ ಅಪರಾಧಿಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ದಿವಂಗತ ಎಸ್ ನಿಜಲಿಂಗಪ್ಪ ಅವರ ಮನೆಯಲ್ಲಿ ಕಳುವಾಗುತ್ತಿರುವುದು ಇದೇ ಮೊದಲಲ್ಲ. ಹದಿನೈದು ದಿನಗಳ ಹಿಂದಷ್ಟೇ ತಾಮ್ರದ ಹಂಡೆಯೊಂದು ನಿಜಲಿಂಗಪ್ಪ ಅವರ ಮನೆಯಿಂದ ಕಳುವಾಗಿತ್ತು. ನಿಜಲಿಂಗಪ್ಪ ಅವರ ಮನೆ ಚಿತ್ರದುರ್ಗದ ಹೃದಯಭಾಗದಲ್ಲೇ ಇದ್ದು ಕಳ್ಳರು ನಿರ್ಭೀತಿಯಿಂದ ಕಳುವು ಮಾಡಿರುವ ಬಗ್ಗೆ ಚಿತ್ರದುರ್ಗ ನಾಗರೀಕರು ಪೊಲೀಸ್ ವ್ಯವಸ್ಥೆಯ ಬಗ್ಗೆ ಕಿಡಿ ಕಾರಿದ್ದಾರೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು ಕಳ್ಲರ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದೆ. ನಿಜಲಿಂಗಪ್ಪ ಅವರ ಮನೆಯನ್ನು ಸರಕಾರದ ವತಿಯಿಂದ ವಸ್ತುಸಂಗ್ರಹಾಲಯವಾಗಿರೂಪಿಸಲು ಚಿತ್ರದುರ್ಗ ಜಿಲ್ಲಾಡಳಿತ ನಿರ್ಧರಿಸಿತ್ತು. ಪ್ರಸ್ತುತ ನಿಜಲಿಂಗಪ್ಪ ಅವರ ಮನೆ ತಾತ್ಕಾಲಿಕ ವಸ್ತುಸಂಗ್ರಹಾಲಯವಾಗಿಯೂ ಮಾರ್ಪಟ್ಟಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X