ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ರೇಣುಕಾಚಾರ್ಯ ವಿರುದ್ಧ ಅರೆಸ್ಟ್ ವಾರೆಂಟ್

|
Google Oneindia Kannada News

Jayalakshmi
ಬೆಂಗಳೂರು, ನ. 5: ನರ್ಸ್ ಜಯಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯ ಅವರ ವಿರುದ್ಧ ನಗರದ ಸಿವಿಲ್ ನ್ಯಾಯಾಲಯ ಒಂದು ವಾರದ ಹಿಂದೆಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅವರನ್ನು ಬಂಧಿ ಸುವಂತೆ ಆದೇಶಿಸಿದೆ. ನ.17 ರೊಳಗೆ ನ್ಯಾಯಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಮೂರ್ತಿ ಕಿರಣ್ ಕಿಣಿ ಆದೇಶಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ನಗರದ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಮೂರು ಬಾರಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರನ್ನು ಕಡ್ಡಾಯವಾಗಿ ಕರೆತರುವಂತೆ ವಿಧಾನ ಸೌಧ ಎಸಿಪಿಗೆ ಸೂಚಿಸಿದೆ. ಈ ಹಿಂದೆ ರೇಣುಕಾಚಾರ್ಯ ವಿರುದ್ಧ ಸಮನ್ಸ್ ಜಾರಿಗೊಳಿಸಲಾಗಿತ್ತು. ನಂತರ ನೋಟೀಸ್ ಜಾರಿ ಮಾಡಿತ್ತು. ಆದರೂ ಮೂರು ಬಾರಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈ ಆದೇಶ ಹೊರಡಿಸಿದೆ. ಅರೆಸ್ಟ್ ವಾರಂಟ್ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗೆ ಸಿಗದ ಕಾರಣ ಮತ್ತೊಮ್ಮೆ ಜಾರಿ ಮಾಡಿರುವ ಬಗ್ಗೆ ಚಂದ್ರಲೇಔಟ್ ಠಾಣೆ ಪೊಲೀಸರು ಖಚಿತ ಪಡಿಸಿದ್ದಾರೆ.

ರಜೆ ಇದ್ದ ಕಾರಣ ತಮಗೆ ಈ ಬಗ್ಗೆ ಮಾಹಿತಿ ಬಂದಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಬೇರೆ ಇನ್ಸ್‌ಪೆಕ್ಟರ್‌ಗಳು ಸ್ವೀಕರಿಸಿರಬಹುದು. ಈ ಬಗ್ಗೆ ವಿಚಾರಿಸುತ್ತೇನೆ ಎಂದು ವಿಧಾನಸೌಧ ಎಸಿಪಿ ತಿಳಿಸಿದ್ದಾರೆ. 2007 ರಲ್ಲಿ ಈ ಸಂಬಂಧ ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೇಣುಕಾಚಾರ್ಯ ಅವರ ಕಿರುಕುಳ ಸಹಿಸದೆ ನರ್ಸ್ ಹಾಗೂ ಶಿಕ್ಷಣ ಸಂಸ್ಥೆಯ ನಿರ್ದೇಶಕಿಯಾಗಿದ್ದ ಜಯಲಕ್ಷ್ಮಿ ಅವರು ಆತ್ಮಹತ್ಯೆಗೆ ಪ್ರಯತ್ನ ಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ತಮ್ಮ ಜೊತೆ ಶಾಸಕ ರೇಣುಕಾಚಾರ್ಯ ಅನೈತಿಕ ಸಂಬಂಧ ಹೊಂದಿದ್ದರು ಎಂದು ಮಾಧ್ಯಮಗಳಿಗೆ ಫೋಟೊ ಸಹಿತ ಜಯಲಕ್ಷ್ಮಿ ದುಃಖ ತೋಡಿಕೊಂಡಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X