ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಈಗ ದಾರಿ ಕಾಣದಾಗಿದೆ !

|
Google Oneindia Kannada News

Yeddyurappa
ನವದೆಹಲಿ, ನ. 5 : ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದು ಸಂಜೆಯೊಳಗೆ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂಬ ಮಾತು ಬರೀ ಮಾತಾಗಿ ಉಳಿಯಲಿದೆಯೇ ? ಯಡಿಯೂರಪ್ಪ ಅವರು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಮತ್ತು ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನೊಂದಡೆ ವೆಂಕಯ್ಯ ನಾಯ್ಡು ಅವರೊಂದಿಗೆ ಜನಾರ್ದನರೆಡ್ಡಿ ಮಾತುಕತೆ ನಡೆಸಿದರಾದರೂ ತಮ್ಮ ಬಿಗಿ ನಿಲುವನ್ನು ಸಡಿಲಿಸುತ್ತಿಲ್ಲ.

ವೆಂಕಯ್ಯ ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಿತಕ್ಕಾಗಿ ಬದಲಾವಣೆ ಆಗಲೇಬೇಕು. ನಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಆದರೆ, ಬಿಜೆಪಿ ನಾಯಕರು ರೆಡ್ಡಿ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲಕಾರಿಯಾಗಿಲ್ಲ. ನಾಯಕತ್ವ ಬದಲಾವಣೆ ಬಿಟ್ಟು ಬೇರೆ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ. ರೆಡ್ಡಿ ಮಾತ್ರ ನನ್ನ ಬೇಡಿಕೆ ಒಂದೇ ಅದು ನಾಯಕತ್ವ ಬದಲಾವಣೆ ಎಂದು ಹೈಕಮಾಂಡ್ ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತಿರಸ್ಕರಿಸಿದ ರೆಡ್ಡಿ, ಅದರ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ದೆಹಲಿಗೆ ಭೇಟಿ ನೀಡಿದ ಯಡಿಯೂರಪ್ಪ ಪಕ್ಷದ ವರಿಷ್ಠರನ್ನು ಬೇಟಿ ರಾಜ್ಯ ರಾಜಕೀಯ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿ ನಾಯಕರು ಮಾತ್ರ ಬಿಕ್ಕಟ್ಟು ಶಮನಗೊಳ್ಳಲಿದೆ ಎಂದು ಹೇಳುತ್ತಾರಾದರೂ ಸ್ಪಷ್ಟವಾಗಿ ಏನನ್ನೂ ತಿಳಿಸುತ್ತಿಲ್ಲ. ಮೂಲಗಳ ಪ್ರಕಾರ ನಾಯಕತ್ವ ಬಿಟ್ಟು ಬೇರೆ ಎಲ್ಲ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸಲು ಸಿಎಂ ಕೂಡಾ ಸಮ್ಮತಿಸಿದ್ದಾರೆ. ಆದರೆ, ರೆಡ್ಡಿ ಮಾತ್ರ ಹಿಡಿದ ಹಠ ಬಿಡುತ್ತಿಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X