ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಫೆನ್ಸ್ ಕಾಲೇಜಿನ ಮೇಲೆ ಲಷ್ಕರ್ ಗುರಿ

|
Google Oneindia Kannada News

ವಾಷಿಂಗ್ ಟನ್, ನ. 4 : ಭಾರತದ ರಾಷ್ಟ್ರೀಯ ಡಿಫೆನ್ಸ್ ಕಾಲೇಜಿನ ಮೇಲೆ ದಾಳಿ ನಡೆಸಲು ಲಷ್ಕರ್ ಇ ತೊಯ್ಬಾ ಸಂಘಟನೆ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಬಯಲುಗೊಳಿಸಿದೆ.

ಕಳೆದ ತಿಂಗಳ ಅಮೆರಿಕ ನಿವಾಸಿ ಡೆವಿಡ್ ಕೋಲ್ ಮನ್ ಹೆಡ್ಲಿ ಮತ್ತು ಪಾಕಿಸ್ತಾನ ಮೂಲದ ಕೆನಡಾ ನಿವಾಸಿ ತವಾಹರ್ ಹುಸೇನ್ ರಾಣಾ ಅವರನ್ನು ಬಂಧಿಸಿದ್ದ ಎಫ್ ಬಿಐ, ನಂತರ ನಡೆಸಿದ ವಿಚಾರಣೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ. ರಾಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ರಾಣಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿರುವ ಸಂಗತಿಯನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ರಾಣಾ ಉಗ್ರರೊಂದಿಗೆ ನಂಟಿರುವುದು ದೃಢಪಟ್ಟರೆ, ಕನಿಷ್ಠ 30 ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆವಿಡ್ ಹೆಡ್ಲಿ ಮತ್ತು ರಾಣಾ ಇಬ್ಬರೂ ಬಾಲ್ಯ ಸ್ನೇಹಿತರು. ಅಮೆರಿಕದ ನಿವಾಸಿಯಾಗಿರುವ ಹೆಡ್ಲಿ ರಾಣಾ ಜೊತೆ ಸೇರಿಕೊಂಡು ಭಾರತ ಮತ್ತು ಡೆನ್ಮಾರ್ಕ್ ನಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿರುವುದು ಈಗಾಗಲೇ ಪತ್ತೆ ಹಚ್ಚಲಾಗಿದೆ. ಭಾರತದ ರಕ್ಷಣಾ ಕಾಲೇಜು ಮತ್ತು ಡೆನ್ಮಾರ್ಕ್ ನಲ್ಲಿ ಸ್ಫೋಟ ಕೃತ್ಯ ನಡೆಸುವವರಿದ್ದರು. ಈ ವಿಷಯವನ್ನು ಡೆನ್ಮಾರ್ಕ್ ನ ರಾಷ್ಟ್ರೀಯ ಪತ್ರಿಕೆಯೊಂದು ಈ ಹಿಂದೆ ವರದಿ ಮಾಡಿತ್ತು. ಇದರ ಜಾಲ ಹಿಡಿದ ಅಮೆರಿಕದ ಎಫ್ ಬಿಐ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X