ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂಜಿನಿಯರುಗಳಿಗೆ ಮತ್ತೆ ಕೆಲಸಕ್ಕೆ ಬುಲಾವ್
ಕಳೆದ ಒಂದು ವರ್ಷ ಪಿಂಕ್ ಸ್ಲಿಪ್ ಹಾವಳಿಯಿಂದ ಸಾಕಪ್ಪ ಸಾಕು ಈ ಸಾಫ್ಟ್ ವೇರ್ ನೌಕರಿ ಎಂದು ಆತಂಕದಿಂದ ದಿನದೂಡುತ್ತಿದ್ದ ಟೆಕ್ಕಿಗಳು ಇನ್ನು ಭಯಬೀಳುವ ಅಗತ್ಯವಿಲ್ಲ. ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಅಕ್ಸೆಂಚರ್ ಸೇರಿದಂತೆ ಅನೇಕ ಸಾಫ್ಟ್ ವೇರ್ ಕಂಪನಿಗಳು ಉದ್ಯೋಗ ಬೇಟೆ ಆರಂಭಿಸುವ ಸಿದ್ಧತೆಯಲ್ಲಿ ತೊಡಗಿವೆ. ಮುಂದಿನ ಮಾರ್ಚ್ 2010ರ ವೇಳೆಗೆ ಸುಮಾರು 70-80 ಸಾವಿರ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಕ್ಯಾಂಪಸ್ ಸಂದರ್ಶನವೂ ಶೀಘ್ರದಲ್ಲಿ ಆರಂಭವಾಗಲಿದ್ದು, 6 ಮತ್ತು 7ನೇ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸುಳಿವನ್ನು ಕಂಪನಿಗಳು ನೀಡಿವೆ ಎಂದು ನಾಸ್ಕಾಮ್ ಅಧಿಕಾರಿಗಳು ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ತಿಳಿಸಿದೆ.
(ಏಜನ್ಸೀಸ್)
ಆರ್ಥಿಕ ಕುಸಿತ ಇನ್ಫೋಸಿಸ್ infosys wipro recession software ವಿಪ್ರೋ ಟಿಸಿಎಸ್ tcs engineering ಸಾಫ್ಟ್ ವೇರ್ hiring ನೌಕರಿ accenture campus interview ಕ್ಯಾಂಪಸ್ ಸಂದರ್ಶನ ಉದ್ಯೋಗ
Story first published: Monday, November 2, 2009, 17:14 [IST]