ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕ್ಕಟ್ಟಿಗೆ ಕಾರಣ ನಾನಲ್ಲ: ಜಗದೀಶ್ ಶೆಟ್ಟರ್

|
Google Oneindia Kannada News

Jagadish Shettar
ಬೆಂಗಳೂರು, ಅ.31: ಪಕ್ಷದಲ್ಲಿ ಉಂಟಾಗಿರುವ ಸದ್ಯದ ಬಿಕ್ಕಟ್ಟಿಗೆ ನಾನು ಕಾರಣ ಅಲ್ಲ. ಈ ಪರಿಸ್ಥಿತಿಗೆ ಕಾರಣರಾದವರನ್ನು ಕೂರಿಸಿ ಪರಿಹಾರ ಹುಡುಕಿ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮುಖ್ಯಮಂತ್ರಿ ಪರವಾಗಿ ಸಂಧಾನಕಾರರಾಗಿ ಬಂದವರಿಗೆ ಶೆಟ್ಟರ್ ಹೀಗೆ ಖಡಕ್ ಉತ್ತರ ನೀಡಿದ್ದಾರೆ.

ಶೆಟ್ಟರ್ ಅವರನ್ನು ತಮ್ಮ ಪಾಳಯಕ್ಕೆ ಎಳೆದುಕೊಂಡರೆ ರೆಡ್ಡಿ ಸಹೋದರರ ಬಣ ದುರ್ಬಲಗೊಳ್ಳಲಿದೆ ಎಂಬ ಹಿನ್ನೆಯಲ್ಲಿ ಶೆಟ್ಟರ್ ಮನವೊಲಿಸಲು ಮಠಾಧೀಶರು, ಪಕ್ಷದ ಅಧ್ಯಕ್ಷರು ಹಾಗೂ ಹಿರಿಯ ಸಚಿವರನ್ನು ಕಳುಹಿಸಲಾಗಿತ್ತು. ಆದರೆ ಶೆಟ್ಟರ್ ತಮ್ಮ ನಿಲುವನ್ನು ಸಡಿಲಗೊಳಿಸಲಿಲ್ಲ.

ಬಿಕ್ಕಟ್ಟಿಗೆ ಕಾರಣರಾದವರನು ಒಂದೆಡೆ ಸೇರಿಸಿ ಪರಿಹಾರ ಹುಡುಕಿ. ಇಂದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಶಾಸಕರಲ್ಲಿ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು. ಈ ಬಗ್ಗೆ ಎಚ್ಚರಿಸಿದರೂ ಯಾರು ತಲೆಕೆಡಿಸಿಕೊಳ್ಳಲಿಲ್ಲ. ಈಗ ಶಾಸಕರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ನೀವೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಿ ಎಂದು ಸಂಧನಾಕಾರರನ್ನು ಶೆಟ್ಟರ್ ಸಾಗಹಾಕಿದ್ದಾರೆ ಎನ್ನುತ್ತದೆ ಅವರ ಆಪ್ತ ವಲಯ.

ಬಹಳ ವರ್ಷಗಳಿಂದ ಪಕ್ಷ ಸಂಘಟಿಸಿದವನಿಗೆ ಸಚಿವ ಸ್ಥಾನ ಕೇಳುವ ಹಕ್ಕಿದೆ. ಸರಕಾರ ರಚನೆಯಾದಾಗ ತಮಗೆ ಮಂತ್ರಿ ಪದವಿ ಕೊಡಲಿಲ್ಲ. ಮೂಲೆ ಗುಂಪು ಮಾಡಿದರು. ಸಕ್ರಿಯ ರಾಜಕೀಯದಿಂದ ದೂರ ಮಾಡಲು ಸ್ಪೀಕರ್ ಹುದ್ದೆ ನೀಡಲಾಯಿತು. ಆಗ ಸಂಧನಾಕ್ಕೆ ಯಾರು ಬರಲಿಲ್ಲ. ತಮ್ಮ ನೋವು ಆಲಿಸಲಿಲ್ಲ ಎಂದು ಶೆಟ್ಟರ್ ಸಂಧಾನಕಾರರ ಬಾಯಿ ಮುಚ್ಚಿಸಿದ್ದಾರೆ.

ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ವಕ್ತಾರ ಸಿ ಟಿ ರವಿ ಹಾಗೂ ರಾಮದಾಸ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ಶೆಟ್ಟರ್ ಮನವೊಲಿಸಲು ಪ್ರಯತ್ನಿಸಿದರು ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X