ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷ ನಾನೇ ಸಿಎಂ: ಯಡಿಯೂರಪ್ಪ

|
Google Oneindia Kannada News

Yeddyurappa
ಬೆಂಗಳೂರು, ಅ.31: ಮೌನಕ್ಕೆ ಶರಣಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಿಂದ ರಾಜಧಾನಿಗೆ ಹಿಂತಿರುಗಿದ ಬಳಿಕ ಬಿಕ್ಕಟ್ಟು ಕುರಿತು ತುಟಿ ಬಿಚ್ಚಿ ಮಾತನಾಡಿದ್ದಾರೆ. ಸರಕಾರ ಐದು ವರ್ಷ ಪೂರೈಸುವುದು ಮಾತ್ರವಲ್ಲ ಹತ್ತು ವರ್ಷಗಳವರೆಗೆ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಾರಿದ್ದಾರೆ.

ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ಜೀವನ ಎಂದರೆ ಚಾಲೆಂಜ್ ಇದ್ದಂತೆ. ಬಿಕ್ಕಟ್ಟನ್ನು ಚಾಲೆಂಜ್ ನಂತೆ ಸ್ವೀಕರಿಸಿ ಶೀಘ್ರದಲ್ಲೇ ಪರಿಹರಿಸಿಕೊಳ್ಳುತ್ತೇವೆ. ಎಲ್ಲಿಯವರೆಗೆ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಶ್ರೀರಾಮುಲು, ಕರುಣಾಕರ ರೆಡ್ಡಿ, ಜನಾರ್ದನರೆಡ್ಡಿ ಅಥವಾ ಯಡಿಯೂರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದಷ್ಟೇ ಅವರೆಲ್ಲರ ಬೇಡಿಕೆ. ಅಷ್ಟೇ ವಿನಃ ನೀವಂದುಕೊಂಡಂತೆ ಇನ್ನೇನು ಆಗಿಲ್ಲ. ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಪ್ರತಿಕ್ರಿಯಿಸಿದರು. ನವೆಂಬರ್ 4ರಂದು ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಸಿಎಂಗೆ 83 ಶಾಸಕರ ಬೆಂಬಲ: ಬಚ್ಚೇಗೌಡ
ಯಡಿಯೂರಪ್ಪ ಅವರಿಗೆ 83 ಶಾಸಕರ ಬೆಂಬಲವಿದೆ ಎಂದು ಕಾರ್ಮಿಕ ಸಚಿವ ಬಿ ಎನ್ ಬಚ್ಚೇಗೌಡ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ರೆಡ್ಡಿಗಳಿಗೆ ಅಷ್ಟು ಶಾಸಕರಬೆಂಬಲವಿದೆ, ಸಿಎಂಗೆ ಇಷ್ಟು ಶಾಸಕರ ಬೆಂಬಲವಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ.ಹಾಗಾಗಿ ತಾವು ಈ ವಿಷಯವನ್ನ ಸ್ಪಷ್ಟಪಡಿಸಬೇಕಾಗಿದೆ ಎಂದರು.ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ರೆಡ್ಡಿಗಳು ಬಲವಂತವಾಗಿ ನಾನಾ ಆಮಿಷಗಳನ್ನು ಒಡ್ಡಿ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಬಚ್ಚೇಗೌಡ ಆರೋಪಿಸಿದರು.

ದೆಹಲಿಗೆ ದೌಡಾಯಿಸಿದ ಸ್ಪೀಕರ್ ಶೆಟ್ಟರ್
ಬಿಜೆಪಿ ಹೈಕಮಾಂಡ್ ಬುಲಾವ್ ಮೇರೆಗೆ ಸ್ಪೀಕರ್ ಜಗದೀಶ್ ಶೆಟ್ಟರ್ ಇಂದು ದೆಹಲಿಗೆ ಹೊರಟರು. ಇಂದು ರಾತ್ರಿ ಅವರು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಅರುಣ್ ಜೇಟ್ಲೆ ಅವರನ್ನು ಭಾನುವಾರ ಅಥವಾ ಸೋಮವಾರ ಭೇಟಿಯಾಗುವ ಸಾಧ್ಯತೆ ಇದೆ.

ದೆಹಲಿಗೆ ಹಾರಿಗೆ ಗೃಹ ಸಚಿವ ಆಚಾರ್ಯ
ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಮುಂದುವರಿಯುತ್ತೇವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ನವೆಂಬರ್ 2ರಿಂದ ನೆರೆ ಪರಿಸ್ಥಿತಿಯ ಪುನರ್ವಸತಿ ಕಾರ್ಯ ನಡೆಯಲಿದೆ ವಿವರವನ್ನು ಗೃಹ ಸಚಿವರು ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X