ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಕುಸಿತದಿಂದ ಮೇಲೆದ್ದ ಅಮೆರಿಕ

|
Google Oneindia Kannada News

Baraack Obama
ವಾಷಿಂಗ್ ಟನ್, ಅ. 30 : ವಿಶ್ವದ ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಅಮೆರಿಕ ಆರ್ಥಿಕ ಕುಸಿತದಿಂದ ಹೊರಬಂದಿದ್ದು, ಗ್ರಾಹಕರ ಮತ್ತು ಸರಕಾರದ ಗರಿಷ್ಠ ಪ್ರಮಾಣದ ವೆಚ್ಚದ ಫಲವಾಗಿ ಈ ಚೇತರಿಕೆ ಕಂಡುಬಂದಿದೆ. ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ತೃತೀಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನವು (ಜಿಡಿಪಿ) ಶೇ. 3.5 ರಷ್ಟು ವೃದ್ಧಿಯಾಗಿದೆ.

ಈ ವರ್ಷಾವಧಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ದಾಖಲಾಗಿದೆ. ಈಗ ದೇಶದ ಜಿಡಿಪಿಯು ಶೇ. 3.5ರಷ್ಟು ವೃದ್ಧಿಯಾಗಿದೆ ಎಂದು ಆರ್ಥಿಕ ವಿಶ್ಲೇಷಣೆ ಮಂಡಳಿ(ಬಿಇಎ) ಅಂದಾಜು ಮಾಡಿದೆ. ಜಿಡಿಪಿಯಲ್ಲಿ ಎರಡು ಮೂರಾಂಶದಷ್ಟು ಪಾಲು ಹೊಂದಿರುವ ಗ್ರಾಹಕರ ವೆಚ್ಚವು ಈ ಅವಧಿಯಲ್ಲಿ ಶೇ. 3.4 ರಷ್ಟು ಏರಿಕೆ ದಾಖಲಿಸಿದೆ. ಇದಕ್ಕೂ ಮುನ್ನ ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ.0.9ರಷ್ಟು ಕುಸಿತ ದಾಖಲಿಸಿತ್ತು.

ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಅರ್ಥ ವ್ಯವಸ್ಥೆ ಶೇ. 0.7ರಷ್ಟು ಕಂಡಿತ್ತು. ವಿನಾಶದ ಅಂಚಿಗೆ ಸರಿಯುತ್ತಿದ್ದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲು ಅಮೆರಿಕ ಸರಕಾರವು ಭಾರ ಪ್ರಮಾಣದ ಹಣಕಾಸು ನೆರವು ಘೋಷಿಸಿತ್ತು. 2008ರ ಸೆಪ್ಟೆಂಬರ್ ನಲ್ಲಿ ಅಮೆರಿಕವು ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಗುರಿಯಾಗಿತ್ತು. 1930ರ ನಂತರ ಇಂತಹ ವಿಷಮ ಪರಿಸ್ಥಿತಿ ಉದ್ಭವಿಸಿತ್ತು. ಈ ಬಿಕ್ಕಟ್ಟು ವಿಶ್ವದಾತ್ಯಂತ ತಲ್ಲಣ ಮೂಡಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X