ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಯದಲ್ಲಿ ಘಮಘಮ ಮಲ್ಲಿಗೆ ಹಾವಳಿ!

|
Google Oneindia Kannada News

Blue Film racket on mobile phones rampant in Sulya
ಮಂಗಳೂರು, ಅ. 28 : ಕರ್ನಾಟಕ ಕರಾವಳಿ ಪ್ರದೇಶದ ರಾಜಧಾನಿ ಮಂಗಳೂರಿಗೆ ತನ್ನದೇ ಆದ ಪ್ರಾದೇಶಿಕ ವೈವಿಧ್ಯಗಳಿವೆ. ಸಮುದ್ರ, ಬಂದರು, ಮಂಗಳೂರು ಹಂಚುಗಳಿಗೆ ಹೆಸರುವಾಸಿಯಾಗಿದ್ದ ಮಂಗಳೂರು ಪ್ರಾಂತ್ಯ ಕ್ರಮೇಣ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಾ ಬಂದಿದೆ. ವಿಮಾನ ನಿಲ್ದಾಣ, ಅರಬ್ ಹಣ, ದುಬೈ ನೌಕರಿಯಿಂದ ಪ್ರಭಾವಿತವಾದ ನಗರ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದೆ.

ಮಂಗಳೂರು ಎಂದಾಕ್ಷಣ ಉಲ್ಲಾಳ, ಭಟ್ಕಳ ಮುಂತಾದ ಊರುಗಳಲ್ಲಿ ಆಗಾಗ ಸಂಭವಿಸುವ ಕೋಮುಗಲಭೆ ಎನ್ನುವಂತಾಗಿದೆ. ಈ ಮಧ್ಯೆ ಚರ್ಚುಗಳ ಮೇಲೆ ದಾಳಿ, ರಾಮಸೇನೆಯ ಮಧ್ಯಪ್ರವೇಶ, ಗಲಭೆ, ಬಂಧನದ ಪ್ರಕರಣಗಳು ಸಾಮಾನ್ಯವಾಗಿವೆ. 18 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡ್ದಿದ ದೈಹಿಕ ಶಿಕ್ಷಕ ಆನಂದಕುಮಾರ್ ಕೊನೆಗೂ ಸೆರೆಯಾದದ್ದು ಇದೇ ಜಿಲ್ಲೆಯಲ್ಲೇ. ಮೊನ್ನೆ ದುಬೈನಲ್ಲಿ ಬಂಧಿತನಾದ ಎಂದು ವರದಿಯಾಗಿರುವ ಬನ್ನಂಜೆರಾಜ ಕೂಡ ಉಡುಪಿಯ ಪ್ರಜೆಯೇ.

ಇವೆಲ್ಲವುದರ ಹಾವಳಿಯಲ್ಲಿ ಮಂಗಳೂರಿನ ಮೀನಿನ ಸಾರು, ಕುಂದಾಪುರದ ತೊಂಡೇಕಾಯಿ ಗೇರುಬೀಜದ ಪಲ್ಯ, ಉಡುಪಿ ಕೃಷ್ಣಮಠದ ಕುಂಬಳಕಾಯಿ ಹುಳಿಗಳು ಸುದ್ದಿಯಾಗುತ್ತಿಲ್ಲ. ಅಡಿಕೆ ಧಾರಣೆ, ವೆನಿಲಾ ಬೆಳೆ, ರಬ್ಬರ್ ಉತ್ಪಾದನೆ, ನಲ್ಲಿಗಳಲ್ಲಿ ತೂರಿಬರದೆ ಸಮುದ್ರದ ಪಾಲಾಗುವ ನೇತ್ರಾವತಿ ನದಿ ನೀರಿನ ಬಗ್ಗೆ ಸಮುದಾಯ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅಂತೂ ಮಂಗಳೂರು ನಗರ ಅಮೆರಿಕಾದ ಬೋಸ್ಟನ್ ಮತ್ತು ಲಾಸ್ ಏಂಜಲೀಸ್ ಆಗುತ್ತಿದೆ. ಮಂಗಳೂರು ಮಲ್ಲಿಗೆ ಹೂವಿಗೆ ತುಂಬಾ ಪ್ರಸಿದ್ದಿ. ಆದರೆ, ಇವತ್ತು "ಮಲ್ಲಿಗೆ" ಎಂದರೆ ಮಂದಿ "ಘಮಘಮ ಮಲ್ಲಿಗೆಯಾ" ಮಾರಾಯ ಎಂದು ಕೇಳುವಂತಾಗಿದೆ.

ಇನ್ನೊಂದು ವಿಚಾರವೆಂದರೆ ಮಂಗಳೂರು ಜಿಲ್ಲೆಯಲ್ಲಿ ಬೇರೂರಿರುವ ಬ್ಲೂ ಫಿಲ್ ಕಲ್ಚರ್. ಈ ಸಂಸ್ಕೃತಿಗೆ ಮಂಗಳೂರು ನಗರಕ್ಕಿಂತ ಪಕ್ಕದ ತಾಲೂಕುಗಳಾದ ಬೆಳ್ತಂಗಡಿ, ಸುಳ್ಯ, ಕುಂದಾಪುರ, ಮುಂತಾದ ಚಿಕ್ಕ ಚಿಕ್ಕ ಊರುಗಳು ಹೆಚ್ಚು ಪ್ರಸಿದ್ದಿ ಪಡೆದಿವೆ. ವೀಡಿಯೋ ಪಾರ್ಲರ್, ನೀಲಿ ಚಿತ್ರಗಳ ಪ್ರದರ್ಶನ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಇಲ್ಲಿಂದ ವರದಿಯಾಗುತ್ತಲೇ ಇರುತ್ತವೆ.

ಇವತ್ತು ಮಂಗಳೂರು ಜಿಲ್ಲೆಯಿಂದ ಹೊರಟಿರುವ ಹೊಸ ಸಮಾಚಾರದ ಪ್ರಕಾರ ಬ್ಲೂ ಫಿಲಂ ದಂಧೆ ಸುಳ್ಯದಲ್ಲಿ ಮತ್ತೆ ತಲೆಯೆತ್ತಿ ರಾರಾಜಿಸುತ್ತಿದೆ. ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ಹರಿದಾಡುವ 'ಬ್ಲೂ ಫಿಲಂ' ದಂಧೆ ಸುಳ್ಯ ತಾಲೂಕಿನಲ್ಲಿ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಈ ಸಾಲಿಗೆ 'ಮಲ್ಲಿಗೆ' ಸರಣಿಯ ಕ್ಲಿಪ್ಪಿಂಗ್ಸ್ ಹೊಸದಾಗಿ ಸೇರ್ಪಡೆಯಾಗಿದೆಯಂತೆ. ಪಾದರಕ್ಷೆ ಅಂಗಡಿಯಲ್ಲಿ ಇದರ ಚಿತ್ರೀಕರಣ ನಡೆದಿದ್ದು ಯುವತಿಯ ಇಚ್ಛೆಗೆ ವಿರುದ್ಧವಾಗಿ ಮೊಬೈಲ್ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸುಳ್ಯ ತಾಲೂಕಿನ ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಆಕೆಯ ನಗ್ನ ದೇಹವನ್ನು ಸೆರೆ ಹಿಡಿದು ಸುಮಾರು ನಾಲ್ಕು ನಿಮಿಷಗಳ ಕ್ಲಿಪ್ಪಿಂಗ್ಸ್ ತಯಾರಿಸಿ 'ಘಮಘಮ ಮಲ್ಲಿಗೆ' ಎಂಬ ಹೆಸರಿನಿಂದ ಫಾರ್ವರ್ಡ್ ಮಾಡಲಾಗುತ್ತಿದೆ. ಯುವತಿಯನ್ನು ಕರೆತಂದು ಕಾಮತೃಷೆ ತೀರಿಸಿಕೊಂಡ ಮೇಲೆ ಇದರ ಚಿತ್ರೀಕರಣ ಮಾಡಲಾಗಿದೆ. ದಯವಿಟ್ಟು ಶೂಟಿಂಗ್ ಮಾಡಬೇಡ ಎಂದು ತರುಣಿ ಮನವಿ ಮಾಡುತ್ತಿರುವುದು ದೃಶ್ಯದಲ್ಲಿ ಗೋಚರಿಸಿದೆ ಎಂದು ನೋಡಿದವರೆಂದು ಹೇಳಿಕೊಂಡವರು ಹೇಳುತ್ತಿದ್ದಾರೆ.

ಕೆಲವೇ ತಿಂಗಳ ಹಿಂದೆ ಈ ಭಾಗದ ಯುವಕರ ಮತ್ತು ವಿಧ್ಯಾರ್ಥಿಗಳ ಮೊಬೈಲ್ ಗಳಲ್ಲಿ ವಿದ್ಯಾರ್ಥಿನಿಯೊಬ್ಬಳ 'ನಾರ್ಣಕಜೆ ಮಲ್ಲಿಗೆ' ಎನ್ನುವ ಹೆಸರಿನ ಅರೆನಗ್ನ ಚಿತ್ರಗಳ ಎರಡು ನಿಮಿಷಗಳ ಕ್ಲಿಪ್ಪಿಂಗ್ ಹರಿದಾಡುತ್ತಿತ್ತು. ಇದರ ಶೂಟಿಂಗ್ ನಡೆಸಿದ್ದ ಪ್ರಶಾಂತ್ ಕೆರೆಗೆದ್ದೆ ಎನ್ನುವ ಸ್ಥಳೀಯ ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X