ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಉಗ್ರರಿಗೆ ಭಾರತದ ಬೆಂಬಲ : ಪಾಕ್

|
Google Oneindia Kannada News

Rehman Mallik
ಇಸ್ಲಾಮಾಬಾದ್, ಅ. 26 : ಅಫ್ಘಾನಿಸ್ತಾನ್ ಗಡಿಯಲ್ಲಿರುವ ತಾಲಿಬಾನ್ ಉಗ್ರರಿಗೆ ಭಾರತ ಹಣಕಾಸು ಸಹಾಯ ನೀಡುತ್ತಿದೆ ಎಂದು ಪಾಕ್ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಶಾಂತಿ ನೆಲೆಸುವಂತೆ ಮಾಡಲು ತಾಲಿಬಾನ್ ಉಗ್ರರನ್ನು ಭಾರತ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮಲಿಕ್, ಭಾರತ ಸಹಿತ ಕೆಲವೊಂದು ಪಾಕ್ ವಿರೋಧಿ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಶಾಂತಿ ನೆಲೆಸದಂತೆ ಮಾಡುವುದಕ್ಕಾಗಿ ತಾಲಿಬಾನ್ ಉಗ್ರರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದ್ದು ಸಂಬಂಧಪಟ್ಟ ದಾಖಲೆಗಳನ್ನು ಸರಕಾರಕ್ಕೆ ನೀಡಿದ್ದೇನೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಚರ್ಚಿಸಲು ಭಾರತದ ಯಾವುದೇ ಸಚಿವರು ಬಂದರೂ ನಾನು ಅದಕ್ಕೆ ತಯಾರಾಗಿದ್ದೇನೆ ಎಂದು ಸವಾಲೆಸೆದಿರುವ ಮಲಿಕ್, ಕಳೆದ ವಾರ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಭಾರತದ ಸಹಕಾರವಿತ್ತು ಎನ್ನುವುದಕ್ಕೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಈ ಬಗ್ಗೆ ಯಾವ ವೇದಿಕೆಯಲ್ಲಿ ಬೇಕಾದರೂ ಇದನ್ನು ರುಜುವಾತುಪಡಿಸಲು ನಾನು ಸಿದ್ದ. ಭಾರತದ ಆಂತರಿಕ ವ್ಯವಹಾರಗಳ ಸಚಿವರನ್ನು ಈ ಸಂಬಂಧ ಪಾಕಿಸ್ತಾನಕ್ಕೆ ಆಹ್ವಾನಿಸುತ್ತಿದ್ದೇನೆ ಮತ್ತು ಭಾರತದ ಕೈವಾಡವನ್ನು ಇಡೀ ವಿಶ್ವಕ್ಕೆ ರುಜುವಾತುಪಡಿಸುತ್ತೇವೆ ಎಂದು ಮಲಿಕ್ ಗುಡುಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X