ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋಗೆ ನೂತನ ಸಾರಥಿ ರಾಧಾಕೃಷ್ಣನ್

|
Google Oneindia Kannada News

K Radhakrishnan
ನವದೆಹಲಿ, ಅ. 25 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೂತನ ಅಧ್ಯಕ್ಷರಾಗಿ ತಿರುವನಂತಪುರಂ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ ರಾಧಾಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ.

ಹಾಲಿ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಅಕ್ಟೋಬರ್ 31 ರಂದು ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನವನ್ನು ರಾಧಾಕೃಷ್ಣನ್ ಅಲಂಕರಿಸಲಿದ್ದಾರೆ. ರಾಧಾಕೃಷ್ಣನ್ ಅವರು ವೈಮಾನಿಕ ಕ್ಷೇತ್ರದ ಖ್ಯಾತ ವಿಜ್ಞಾನಿ ಆಗಿದ್ದಾರೆ. ಅವರ ಆಯ್ಕೆಯನ್ನು ದೆಹಲಿಯಿಂದ ಶನಿವಾರ ದೂರವಾಣಿ ಮೂಲಕ ತಿಳಿಸಲಾಯಿತು. 1970 ರಲ್ಲಿ ಕೇರಳದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದ ರಾಧಾಕೃಷ್ಣನ್ 1976ರಲ್ಲಿ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ.

200ನೇ ಇಸ್ವಿಯಲ್ಲಿ ಇವರು ಪಶ್ಚಿಮ ಬಂಗಾಲದ ಖರಗ್ ಪುರದ ಐಐಟಿಯಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. 1971 ರಲ್ಲಿ ಇಸ್ರೋ ಪ್ರವೇಶಿಸಿದ ರಾಧಾಕೃಷ್ಣನ್ ಬಳಿಕ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಹಂತಹಂತವಾಗಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಗರ ಅಭಿವೃದ್ಧಿ ಇಲಾಖೆಯಲ್ಲೂ ರಾಧಾಕೃಷ್ಣನ್ ಸುನಾಮಿ ಮುನ್ನೆಚ್ಚರಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ, ಬಜೆಟ್ ಹಾಗೂ ಆರ್ಥಿಕ ವಿಶ್ಲೇಷಣಾ ನಿರ್ದೇಶಕರಾಗಿಯೂ ಇರು ಸೇವೆ ಸಲ್ಲಿಸಿದ್ದಾರೆ.

(ಏಜನೀಸ್ಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X