ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಗ್ರೀನ್ ಆಟೋ ಕಡ್ಡಾಯ : ಅಶೋಕ್

|
Google Oneindia Kannada News

Autos must go green in Bengaluru from Nov
ಬೆಂಗಳೂರು, ಅ.24: ಆಟೋ ಚಾಲಕರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರಕಾರ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಪರಿಸರ ಸ್ನೇಹಿ ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸಲು ತೀರ್ಮಾನಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರಿಗೆ ಸಚಿವ ಆರ್ ಆಶೋಕ್ ಅವರು ಶನಿವಾರ ಈ ಬಗ್ಗೆ ವಿವರ ನೀಡಿದರು.

ಚೆನ್ನಮ್ಮ ವಿಜಯೋತ್ಸವದಲ್ಲಿ ಪಾಲ್ಗೊಂಡ ಬಳಿಕ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಗರದಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿದೆ. ಬೆಂಗಳೂರನ್ನು ಹಸಿರು ನಗರವಾಗಿಸಲು ಪರಿಸರಕ್ಕೆ ಪೂರಕವಾದ ಪರಿಸರ ಸ್ನೇಹಿ ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಸ್ತೆಗಿಳಿಯುವ ಹೊಸ ಗ್ರೀನ್ ಆಟೋಗಳಲ್ಲಿ ಗ್ಯಾಸ್ ಸಿಲಿಂಡರ್ ಅಳವಡಿಕೆ, ಜಿಪಿಎಸ್ ಸಿಸ್ಟಂ, ಸಮವಸ್ತ್ರ ಧರಿಸುವುದು, ಡಿಜಿಟಲ್ ಮೀಟರ್ ಮತ್ತು ಚಾಲನಾ ಪರವಾನಗಿ (ಡಿಎಲ್ ) ಕಡ್ಡಾಯವಾಗಿ ಹೊಂದಿರಲೇಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಆಟೋಗಳನ್ನು ರಸ್ತೆಗಿಳಿಯಲು ಬಿಡುವುದಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕೃತ ದಾಖಲಾತಿಗಳಿಲ್ಲದೆ ಕೆಲವು ಆಟೋಗಳು ಸಂಚಾರದಲ್ಲಿ ತೊಡಗಿರುವುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಲು ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸಲು ನಿರ್ಧರಿಸಿರುವುದಾಗಿ ಅಶೋಕ್ ವಿವರಿಸಿದರು.

ಗ್ರೀನ್ ಆಟೋ ಕಡ್ಡಾಯಗೊಳಿಸುವ ಸರಕಾರ ತೀರ್ಮಾನಕ್ಕೆ ಆಟೋ ಚಾಲಕರು ಈ ಹಿಂದೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಆಟೋಗಳಿಗೆ ಹಸಿರು ಬಣ್ಣ ಬಳಿಯಲು ರು.16 ಸಾವಿರದವರೆಗೂ ಖರ್ಚಾಗುತ್ತದೆ ಎಂದು ಚಾಲಕರು ನೋವು ತೋಡಿಕೊಂಡಿದ್ದರು.

ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸುವ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸುವ ಕ್ರಮದಿಂದ ಸರಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X