ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಗೆದ್ದ 'ಪಂಚ ಕನ್ನಡಿಗರು'

|
Google Oneindia Kannada News

Krishna Hegde
ಮುಂಬೈ, ಅ. 23 : ಕಳೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಮಿನಿ ಮಹಾಸಮರ ಎಂದೇ ಬಿಂಬಿಸಲಾಗಿದ್ದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕೈ ಪಡೆ ಕಮಾಲ್ ತೋರಿಸಿದೆ. ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ನಿಚ್ಚಳ ಬಹುಮತ ಪಡೆದಿದ್ದರೆ, ಹರಿಯಾಣದಲ್ಲಿ ಮೇಲಗೈ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎನ್ನುವ ಬಿಜೆಪಿ-ಶಿವಸೇನೆಯ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಮತ್ತೆ ಪಾರಮ್ಯ ಮರೆದಿದೆ. ಸತತ ಮೂರನೇ ಬಾರಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದ ಗದ್ದುಗೆ ಏರಿದಂತಾಗಿದೆ. ಆದರೆ, ಈ ಸಲದ ವಿಶೇಷವೆಂದರೆ ಮಹಾರಾಷ್ಟ್ರ ವಿಧಾನಸಭೆಗೆ ಐವರು ಕನ್ನಡಿಗರು ಪ್ರವೇಶ ಪಡೆದಿರುವುದು ಸಂತಸದ ಸಂಗತಿ. ಈ ಪೈಕಿ ನಾಲ್ವರು ಉಡುಪಿ ಜಿಲ್ಲೆಯವರಾಗಿದ್ದಾರೆ.

1. ಸುರೇಶ್ ಶೆಟ್ಟಿ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಅಂಧೇರಿ ಪೂರ್ವ

ಮಹಾರಾಷ್ಟ್ರ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲದವರು. 2004ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

2. ಜಗನ್ನಾಥ್ ಶೆಟ್ಟಿ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಸಯಾನ್ ಕೋಲಿವಾಡ
ಉಡುಪಿ ಜಿಲ್ಲೆ ಕಾಪುವಿನವರಾದ ಜಗನ್ನಾಥ್ ಈ ಕ್ಷೇತ್ರದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

3. ಕೃಷ್ಣ ಹೆಗ್ಡೆ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಪೂರ್ವ ವಿಲೆಪಾರ್ಲೆ
ಮುಂಬೈನ ಮಾಜಿ ಮೇಯರ್ ಮತ್ತು ಶಿವಸೇನೆಯ ಮಾಜಿ ಶಾಸಕ ರಮೇಶ್ ಪ್ರಭು ಅವರ ಅಳಿಯರಾಗಿರುವ ಕೃಷ್ಣ ಹೆಗ್ಡೆ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನವರು.

4. ಗೋಪಾಲ್ ಶೆಟ್ಟಿ
ಪಕ್ಷ - ಬಿಜೆಪಿ
ಕ್ಷೇತ್ರ - ಬೋರಿವಲಿ
ಈ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗುತ್ತಿರುವ ಇವರು ಉಡುಪಿ ಜಿಲ್ಲೆ ಪಡುಬಿದ್ರೆ ಮೂಲದವರು. ಮುಂಬೈ ಮಹಾನಗರಿಯ ಉಪಮೇಯರ್ ಆಗಿದ್ದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.

5. ಗಿಲ್ಬರ್ಟ್ ಜಾನ್ ಮೆಂಡೋನಾ
ಪಕ್ಷ - ಎನ್ಸಿಪಿ
ಕ್ಷೇತ್ರ - ಮೀರಾ ಭಯಂದರ್
ಮಿನಿ ಮಂಗಳೂರು ಎಂದೇ ಖ್ಯಾತಿಯಾಗಿರುವ ಮೀರಾ ರಸ್ತೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ತುಳು, ಕನ್ನಡಿಗ ಮತ್ತು ಕೊಂಕಣಿ ಜನರೊಂದಿಗೆ ಮೆಂಡೋನಾ ಉತ್ತಮ ಸಂಬಂಧಹೊಂದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X