ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ : ಸಿಸ್ಕೋ ಆಸರೆ ಯೋಜನೆಗೆ ಚಾಲನೆ

|
Google Oneindia Kannada News

Private sector chips in with housing
ಬೆಂಗಳೂರು, ಅ. 23 : ನೆರೆ ಸಂತ್ರಸ್ತರಿಗೆ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಶಾಶ್ವತ ವಸತಿಗಳನ್ನು ನಿರ್ಮಿಸಿಕೊಡುವ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಆಸರೆ ಯೋಜನೆ ಎಂದು ನಾಮಕರಣ ಮಾಡಿದೆ.

ಈ ಯೋಜನೆಯಡಿ ಮುಂದಿನ 6 ರಿಂದ 8 ತಿಂಗಳಲ್ಲಿ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಲ್ಲಿ ಗುರುವಾರ ನಡೆದ ವಿವಿಧ ಕಂಪನಿಗಳು ಹಾಗೂ ಉದ್ಯಮ ಪ್ರತಿನಿಧಿಗಳ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ ಉದ್ಯಮಿಗಳ ಸಭೆ ಮಾತನಾಡಿದ ಮುಖ್ಯಮಂತ್ರಿಗಳು, ನೆರೆ ಸಂತ್ರಸ್ಥರ ಪುನರ್ವಸತಿಗೆ ಕಾರ್ಯಕ್ಕೆ ದೇಣಿಗೆ ನೀಡಬೇಕು. ಇಲ್ಲವೇ ಇಂತಿಷ್ಟು ಮನೆ ನಿರ್ಮಿಸಿಕೊಡಬೇಕು ಎಂಬ ಒತ್ತಾಯವನ್ನು ಸರಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮನೆ ಕಟ್ಟಿಕೊಡಲು ಮುಂದೆ ಬಂದಿರುವವರಿಗೆ ಒಂದು ವಾರದಲ್ಲಿ ಗ್ರಾಮಗಳನ್ನು ವಹಿಸಿಕೊಡಲಾಗುವುದು. ಮನೆಗಳ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಸರಕಾರ ನೀಡಲಿದೆ. ನಿರ್ದಿಷ್ಟ ಮಾದರಿಯಲ್ಲಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಉದ್ಯಮಿಗಳು ಕಾರ್ಯ ಆರಂಭಿಸಬಹುದು ಎಂದು ಯಡಿಯೂರಪ್ಪ ವಿವರಿಸಿದರು.

ಸಿಸ್ಕೋ ನೆರವು
ರಾಯಚೂರು ಜಿಲ್ಲೆಯಲ್ಲಿ 50 ಕೋಟಿ ರುಪಾಯಿ ವೆಚ್ಚದಲ್ಲಿ ಒಟ್ಟು ನಾಲ್ಕು ಸಾವಿರ ಮನೆಗಳನ್ನು ನಿರ್ಮಿಸುವ ಒಡಂಬಡಿಕೆ ಪತ್ರಕ್ಕೆ ಸಿಸ್ಕೋ ಸಂಸ್ಥೆಯ ಉಪಾಧ್ಯಕ್ಷ ಅರವಿಂದ ಸೀತಾರಾಮ್ ಮತ್ತು ನೆರೆ ಪರಿಹಾರ ಕಾರ್ಯಕ್ರಮಗಳ ಅನುಷ್ಟಾನದ ನೋಡಲ್ ಅಧಿಕಾರಿ ಜಾಮದಾರ್ ಸಹಿ ಹಾಕಿದರು. ಮನೆ ಕಟ್ಟಿಕೊಡುವ ಹಳ್ಳಿಯನ್ನು ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸುವ ಮತ್ತು ರಾಯಚೂರು ಜಿಲ್ಲೆಯಲ್ಲಿ ಎರಡು ಅತ್ಯಾಧುನಿಕ ಶಾಲೆ ಮತ್ತು ಒಂದು ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಸಿಸ್ಕೋ ಕಂಪನಿ ನಿರ್ಧರಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X