ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜ್ಪೆಯಿಂದಲೇ ಹಜ್ ಗೆ ರೈಯ

|
Google Oneindia Kannada News

Haj airlines
ಮಂಗಳೂರು, ಅ. 20 : ಕರಾವಳಿ ಕರ್ನಾಟಕದ ಹಜ್ ಯಾತ್ರಾರ್ಥಿಗಳಿಗೆ ಸ್ವಾಗತಾರ್ಹ ಸುದ್ದಿ. ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ಮೆಕ್ಕಾ ಪ್ರಯಾಣಕ್ಕೆ ಬೆಂಗಳೂರಿನ ತನಕ ಬರುವ ಅಗತ್ಯವಿಲ್ಲ.

ಸಮೀಪದ ಮಂಗಳೂರಿನಿಂದಲೇ ಹಜ್ ಯಾತ್ರೆಗೆ ಅನುಕೂಲವಾಗುವಂತೆ ಯುಪಿಎ ಸಕರಾರ ವ್ಯವಸ್ಥೆ ಮಾಡಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವನ್ನು ಹಜ್ ಪ್ರಯಾಣಕ್ಕೆ ಯಾತ್ರಿಕರನ್ನು ಕೊಂಡೊಯ್ಯುವ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿಸಲಾಗಿದ್ದು ಯಾತ್ರಾರ್ಥಿಗಳು ಬಜ್ಪೆ ಏರ್ ಪೋರ್ಟ್ ಅನ್ನೇ ಬಳಸಬಹುದಾಗಿದೆ. ಅಷ್ಟರಮಟ್ಟಿಗೆ ಮುಸ್ಲಿಂ ಧರ್ಮಾನುಯಾಯಿಗಳಿಗೆ ಹೊಸ ಅನುಕೂಲಗಳನ್ನು ಕೇಂದ್ರ ಸರಕಾರ ಕಲ್ಪಿಸಿದೆ. ಈ ಬಾರಿಯ ಹಜ್ ನವೆಂಬರ್ 25 ರಿಂದ 30 ರ ಒಳಗೆ ನಡೆಯುತ್ತದೆ.

ಮಂಗಳೂರು ವಿಮಾನ ನಿಲ್ದಾಣವನ್ನು ಕಸ್ಟಮ್ಸ್ ಏರ್ ಪೋರ್ಟ್ ಎಂದೂ ಕೇಂದ್ರ ಸರಕಾರ 2006 ರಲ್ಲಿ ಘೋಷಿಸಿರುತ್ತದೆ.ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರತುಪಡಿಸಿದರೆ ಅಂತಾರಾಷ್ಟ್ರೀಯ ಹಾರಾಟಕ್ಕೆ ಸಜ್ಜಾದ ಇನ್ನೊಂದು ನಿಲ್ದಾಣ ಮಂಗಳೂರಿನ ಬಜ್ಪೆ ಏರ್ ಪೋರ್ಟ್ ಆಗಿರುತ್ತದೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X