ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಪ್ರತ್ಯೇಕ ರಾಷ್ಟ್ರ: ಚೀನಾ ಪ್ರತಿಪಾದನೆ

|
Google Oneindia Kannada News

Jammu Map
ಬೀಜಿಂಗ್, ಅ.20: ಅರುಣಾಚಲ ಪ್ರದೇಶ ತನ್ನದು ಎಂದು ಭಾರತದೊಂದಿಗೆ ತಕರಾರು ತೆಗೆದಿದ್ದ ಚೀನಾ, ಇದೀಗ ಕಾಶ್ಮೀರ ಭಾರತಕ್ಕೆ ಸೇರದ ಪ್ರತ್ಯೇಕ ಪ್ರಾಂತ್ಯ ಎಂದು ಬಿಂಬಿಸುತ್ತಿದೆ. ಚೀನಾಕ್ಕೆ ಭೇಟಿ ನೀಡುವ ಜಮ್ಮು-ಕಾಶ್ಮೀರದ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡುವ ಮೂಲಕ ಅವರು ಭಾರತೀಯರಲ್ಲ ಎಂದು ಪರೋಕ್ಷವಾಗಿ ಅದು ಪ್ರತಿಪಾದಿಸುತ್ತಿದೆ.

ಚೀನಾ ಸರಕಾರದಿಂದ ಆಹ್ವಾನಿತರಾಗಿ ಟಿಬೆಟ್‌ಗೆ ತೆರಳಿದ್ದ ಪತ್ರಕರ್ತರಿಗೆ ಕಾಶ್ಮೀರದ ಪ್ರತ್ಯೇಕ ನಕ್ಷೆಯನ್ನೇ ನೀಡಿರುವುದು, ಜಮ್ಮು-ಕಾಶ್ಮೀರ ಭಾರತದ ಭಾಗ ಎಂಬುದನ್ನು ಚೀನಾ ಒಪ್ಪಿಕೊಳ್ಳುತ್ತಿಲ್ಲ ಎಂಬುದರ ಸ್ಪಷ್ಟ ಸೂಚನೆ. 1950 ರಲ್ಲಿ ಚೀನಾ ಬಲವಂತದಿಂದ ಆಕ್ರಮಿಸಿಕೊಂಡ ಟಿಬೆಟ್‌ನ ಬಗ್ಗೆ ಮಾಧ್ಯಮ ಮಾಹಿತಿ ನೀಡುವಾಗ, ಇದು ಭಾರತ, ನೇಪಾಳ, ಮ್ಯಾನ್ಮಾರ್ ಮತ್ತು ಕಾಶ್ಮೀರ ಪ್ರಾಂತ್ಯದೊಂದಿಗೆ ಗಡಿ ಹಂಚಿಕೊಂಡಿದೆ ಎಂದು ವಿವರಿಸಲಾಗಿದೆ. ಕಾಶ್ಮೀರ ಪ್ರಾಂತ್ಯ' ಹೊರತುಪಡಿಸಿ ಉಳಿದವೆಲ್ಲ ಸಾರ್ವಭೌಮ ರಾಷ್ಟ್ರಗಳು ಎಂಬುದಿಲ್ಲಿ ಗಮನಾರ್ಹ.

ಚೀನಾ, ಮ್ಯಾನ್ಮಾರ್ ಹಾಗೂ ನೇಪಾಳಗಳಲ್ಲಿ ದೊರೆಯುವ ಭಾರತದ ಯಾವುದೇ ನಕ್ಷೆಯಲ್ಲಿ ಕಾಶ್ಮೀರವನ್ನು ಸೇರಿಸಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಂಧು ನದಿಗೆ ಅಣೆಕಟ್ಟು ಕಟ್ಟಲು ಚೀನಾ ನೀಡುತ್ತಿರುವ ಹಣಕಾಸು ಸಹಾಯವೂ ಅದರ ಚಿಂತನೆ ಎತ್ತ ಹರಿದಿದೆ ಎಂಬುದನ್ನು ಸೂಚಿಸುತ್ತಿದೆ. ಭಾರತ ಹಾಗೂ ನೇಪಾಳ ನಡುವಿನ ಮುಕ್ತ ಗಡಿಯನ್ನು ಬಿಗಿಗೊಳಿಸಬೇಕು. ಏಕೆಂದರೆ ಇದು ಟಿಬೆಟಿಯನ್ನರ ಪ್ರತಿಭಟನೆ ಹಾಗೂ ಚೀನಾ ವಿರೋಧಿ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬುದು ಅದರ ಪ್ರತಿಪಾದನೆ. ಟಿಬೆಟ್ ಧರ್ಮಗುರು ದಲಾಯಿ ಲಾಮಾ ಅವರಿಗೆ ಭಾರತ ಆಶ್ರಯ ನೀಡಿರುವುದಕ್ಕೂ ಚೀನಾ ಅಸಮಾಧಾನಗೊಂಡಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X