ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಟಿ ಬದನೆ ಸಾವಯವ ಕೃಷಿ ಮಿಷನ್ ಅರಿವು

|
Google Oneindia Kannada News

Bt brinjal debate goes to people
ಬೆಂಗಳೂರು, ಅ.17: ರಾಜ್ಯದಲ್ಲಿ ಸಾವಯವ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರವು ಸಾವಯವ ಕೃಷಿ ಮಿಷನ್ ಅಧಿಕಾರಯುಕ್ತ ಸಮಿತಿಯನ್ನು ರಚಿಸಿರುತ್ತದೆ. ಮಿಷನ್ ಉಸ್ತುವಾರಿಯಲ್ಲಿ ರಾಜ್ಯದಲ್ಲಿ 52 ಸಾವಿರಕ್ಕೂ ಅಧಿಕ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಲು ಮುಂದೆ ಬಂದಿದ್ದಾರೆ. ಮುಂಬರುವ ವರ್ಷಗಲ್ಲಿ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಸರ್ಕಾರವು ಹೊಂದಿದೆ.

ಸಾವಯವ ಮಿಷನ್ ವತಿಯಿಂದ ಸ್ಥಳೀಯ/ನಾಟಿ ಬೀಜಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಮುಖ್ಯ ಉದ್ದೇಶವು ರೈತರು ಸಾದ್ಯವಾದಷ್ಟೂ ಮಟ್ಟಿಗೆ ಹೊರಗಿನ ಕಂಪನಿಗಳ ಮೇಲೆ ಬೀಜಕ್ಕೆ ಅಬಲಂಬಿತರಾಗದೇ ತಮ್ಮ ಮಟ್ಟದಲ್ಲಿಯೇ ಸಾಧ್ಯವಾದಷ್ಟೂ ಮಟ್ಟಿಗೆ ಬೀಜವನ್ನು ಉತ್ಪಾದಿಸಿಕೊಳ್ಳುವುದೂ ಆಗಿರುತ್ತದೆ.

ಸ್ಥಳೀಯ/ನಾಟಿ ಬೀಜಗಳಿಗೆ ಭೂಮಿಯಿಂದ ಮತ್ತು ಸಾವಯವ ಗೊಬ್ಬರಗಳಿಂದ ಪೋಷಕಾಂಶಗಳನ್ನು ಚೆನ್ನಾಗಿ ಪಡೆದುಕೊಳ್ಳುವ ಶಕ್ತಿ ಇರುತ್ತದೆ. ಈ ಕಾರಣದಿಂದಾಗಿ ರೈತರ ಉತ್ಪಾದನೆ ವೆಚ್ಚ ಕಡಿಮೆ ಆಗಿರುತ್ತದೆ. ವಿಷ ರಹಿತ ಆಹಾರದ ಉತ್ಪಾದನೆ ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರವು ಜೈವಿಕ ತಂತ್ರಜ್ಞಾನ ರಂಗದ ನಿಯಂತ್ರಣ ಸಂಸ್ಥೆಯಾಗಿರುವ ಕುಲಾಂತರಿ ಅನುಮೋದನಾ ಸಮಿತಿಯು ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ಅನುಮೋದನೆ ನೀಡಿರುವುದು ಮಿಷನ್ ಗಮನಕ್ಕೆ ಬಂದಿರುತ್ತದೆ. ಸಮಿತಿಯು ಅನುಮೋದನೆ ನೀಡಿದರೂ ಬಿ.ಟಿ. ತಳಿಯ ಬದನೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಈ ಸಂಬಂಧದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸುವುದು ಅವಶ್ಯಕ.

ಬಿ.ಟಿ. ಬದನೆ ಬಗ್ಗೆ ಈ ಕೆಳಕಂಡ ತೀವ್ರತರವಾದ ಆಕ್ಷೇಪಣೆಗಳಿರುತ್ತವೆ.

*ಮನುಷ್ಯ, ಜಾನುವಾರುಗಳ ಮತ್ತು ಪರಿಸರದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ.
*ಸ್ಥಳೀಯ/ನಾಟಿ ತಳಿ ಬದನೆಗಳ ನಾಶ.
*ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಜೀಜಕ್ಕಾಗಿ ಅವಲಂಬನೆ ಮತ್ತು ಈ ಕಂಪೆನಿಗಳ ಏಕಸ್ವಾಮ್ಯ.
*ಉತ್ಪದನಾ ವೆಚ್ಚ ಹೆಚ್ಚಳ.
*ಸಾವಯವ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಬಿ.ಟಿ. ತಳಿಗಳಿಗೆ ಅವಕಾಶವಿಲ್ಲ. ಇದರಿಂದಾಗಿ ಸಾವಯವ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳುತ್ತದೆ.

ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದಾಗಿ ಸಾವಯವ ಕೃಷಿಮಿಷನ್ ಕುಲಾಂತರಿ ತಳಿಗಳ ಬಗ್ಗೆ ತನ್ನವಿರೋಧ ವ್ಯಕ್ತಪಡಿಸುತ್ತದೆ. ಈ ವಿಚಾರವಾಗಿ ಮಿಷನ್ ವತಿಯಿಂದ ರೈತರ, ಗ್ರಾಹಕರ, ವಿಜ್ಞಾನಿಗಳ ಕಾರ್ಯಗಾರವೊಂದನ್ನು ಸದ್ಯದಲ್ಲೇ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯ ಸರ್ಕಾರವು ಕೂಡ ಕುಲಾಂತರಿ ತಳಿಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾವಯವ ಕೃಷಿ ಮಿಷನ್ ಅನುವು ಮಾಡಿಕೊಡುತ್ತದೆ. ನಾಟಿ ತಳಿಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಹಾಗೂ ಕುಲಾಂತರಿ ತಳಿಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಿಷನ್ ವ್ಯಾಪಕವಾಗಿ ಹಮ್ಮಿಕೊಳ್ಳಲಿದೆ ಎಂದು ಕೃಷಿ ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X