ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪುರಸ್ಕಾರಕ್ಕೆ ಒಬಾಮಾ ಅರ್ಹ : ಶಶಿ

|
Google Oneindia Kannada News

Shashi Tharoor
ನ್ಯೂಯಾರ್ಕ್, ಅ. 14 : ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿರುವ ಅಮೆರಿದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪ್ರಶಸ್ತಿ ಬಂದಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇಷ್ಟು ಬೇಗ ನೊಬೆಲ್ ಶಾಂತಿ ಪುರಸ್ಕಾರ ಪಡೆಯುವಂತ ಕೆಲಸವನ್ನು ಒಬಾಮಾ ಮಾಡಿರುವುದಾದರೂ ಏನು ಎಂಬುದು ವಿಶ್ವದ ಬಿಲಿಯನ್ ಜನರ ಪ್ರಶ್ನೆಯಾಗಿದೆ. ಆದರೆ, ಭಾರತದ ವಿದೇಶಾಂಗ ಸಚಿವಾಲಯ ರಾಜ್ಯ ಖಾತೆ ಸಚಿವ ಶಶಿ ತರೂರ್ ಅವರಿಗೆ ಮಾತ್ರ ಒಬಾಮಾ ನೊಬೆಲ್ ಶಾಂತಿ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ಇಂದು ನ್ಯೂಯಾರ್ಕ್ ನಲ್ಲಿ ಬಣ್ಣಿಸಿದ್ದಾರೆ.

ಅಮೆರಿಕದ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೂ ಒಂದು ವರ್ಷವೂ ಕಳೆದಿಲ್ಲ. ಅವರು ಅಧಿಕಾರಕ್ಕೆ ಬಂದಾದ ಮೇಲೆ ಎರಡು ಯುದ್ಧಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ನಡುವೆಯೂ ಅವರಿಗೆ ನೊಬೆಲ್ ಘೋಷಣೆಯಾಗಿದೆ. ನೊಬೆಲ್ ಹಣವನ್ನು ಅವರ ದತ್ತಿ ಸಂಸ್ಥೆಗಳಿದೆ ದಾನ ಮಾಡುವುದಾಗಿ ಒಬಾಮಾ ಹೇಳಿದ್ದಾರೆ. ಅದೇನೆ ಇರಲಿ, ನಮ್ಮ ಸಚಿವರಿಗೆ ಮಾತ್ರ ಒಬಾಮಾ ಬೇರೆಯದೆ ಸ್ವರೂಪದಲ್ಲಿ ಕಂಡಿರಬೇಕು ಎನ್ನುವ ಗುಸುಗುಸು ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿದೆ.

ಒಬಾಮಾ ಅಮೆರಿಕದ ಅಡಳಿತ ಗತಿಯನ್ನೇ ಬದಲಿಸಿದ್ದಾರೆ. ವಿಶ್ವ ಮೆಚ್ಚುವ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಜಗತ್ತೇ ಅವರೆಡೆಗೆ ನೋಡುವಂತ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸಲು ಕೈಗೊಂಡಿರುವ ಅವರ ಕ್ರಮಗಳು ಮಾದರಿಯಾಗಿವೆ ಎನ್ನುವುದು ಅವರು ತರೂರ್ ಅವರ ಸಮರ್ಥನೆಯಾಗಿದೆ.

ಶಶಿ ತರೂರ್ ಅವರು ಕೇಂದ್ರ ಸರಕಾರ ಸಚಿವರಲ್ಲಿ ಅತಿಯಾಗಿ ವಿನಾಕಾರಣ ಪ್ರಚಾರದಲ್ಲಿರುವ ವ್ಯಕ್ತಿ. ಯುಪಿಎ ಕೈಗೊಂಡ ಆರ್ಥಿಕತೆ ಕಡಿವಾಣ (austerity drive) ವನ್ನ ಟೀಕಿಸಿ ಸೋನಿಯಾ ಗಾಂಧಿ ಕೋಪಕ್ಕೆ ತುತ್ತಾಗಿದ್ದು ಹಳೆಯ ಸಂಗತಿ. ಅಕ್ಟೋಬರ್ 2 ರಂದು ರಜೆ ತೆಗೆದುಕೊಳ್ಳದೆ ಎರಡು ಗಂಟೆ ಕಾಲ ಹೆಚ್ಚಿಗೆ ಕೆಲಸ ಮಾಡಬೇಕು ಎಂಬ ಫರ್ಮಾನು ಹೊರಡಿಸಿದ ಕೀರ್ತಿಯೂ ಅವರಿಗೆ ಸಲ್ಲಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X