ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಟ್ಟಿ ಚಿನ್ನದ ಗಣಿಯಿಂದ ನೆರವು ಓಲೆ

|
Google Oneindia Kannada News

Renukacharya
ರಾಯಚೂರು, ಅ. 14 : ಮಳೆ ಹಾಗೂ ನೆರೆ ಹಾವಳಿಯಿಂದ ಮನೆ ಕಳೆದು ಕೊಂಡವರಿಗೆ ಹಟ್ಟಿ ಚಿನ್ನದಗಣಿ ವತಿಯಿಂದ ಒಂದು ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಸಂತ್ರಸ್ಥ ಜನರಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಮಾನ್ವಿ ತಾಲೂಕು ಕಾತರಕಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಹಾಗೂ ಸಂತ್ರಸ್ಥರ ಭೇಟಿ ತರವಾಯು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಸಂತ್ರಸ್ಥರ ನೆರವಿಗಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಕೋಟಿ ರೂ. ನೀಡುವುದಾಗಿಯೂ ತಿಳಿಸಿದರು. ಅಗತ್ಯಬಿದ್ದರೆ ಹೆಚ್ಚಿನ ನೆರವು ಒದಗಿಸಲಾಗುವುದು ಎಂದೂ ಶಾಸಕರು ತಿಳಿಸಿದರು.

ಹಟ್ಟಿ ನಗರದ ಸಮಗ್ರ ಅಭಿವೃದ್ಧಿಗಾಗಿ ಇನ್ನೊಂದು ವಾರದಲ್ಲಿ ಹಟ್ಟಿಯಲ್ಲಿ ಕಂಪನಿಯ ಆಡಳಿಯ ಮಂಡಳಿ ಸಭೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಗಣಿ ಪ್ರದೇಶದಲ್ಲಿ ಆಡಳಿತ ಮಂಡಳಿ ಸಭೆ ನಡೆಸಲು ಉದ್ದೇಶಿಸಿದ್ದು ಗಣಿ ಪ್ರದೇಶದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ಹಟ್ಟಿಗೆ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸುಧಾರಣೆಗೆ ಮಹಾತ್ವದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾನ್ವಿಯ ಕಾತರಕಿ, ತಮ್ಮಾಪುರ, ಚಿಕಲ ಪರವಿ, ಹಾಗೂ ದೇವದುರ್ಗ ಹಾಗೂ ಲಿಂಗಸ್ಗೂರ ತಾಲೂಕಿನ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಾಣ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಸರಕಾರ ಜಮೀನು ಒದಗಿಸುವ ಕುರಿತಂತೆ ಜಿಲ್ಲಾ ಆಡಳಿತದೊಂದಿಗೆ ಮನೆಯ ವಿನ್ಯಾಸ ಮಾಡುವ ಎಜೆನ್ಸಿ ಕುರಿತಂತೆ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲಾಭ ಮಾರ್ಗದಲ್ಲಿ ಗಣಿ :ಹಟ್ಟಿ ಚಿನ್ನದ ಗಣನನೀಯ ಲಾಭ ಗಳಿಸಿದೆಯಲ್ಲದೆ ಈ ವರ್ಷ ಕನಿಷ್ಠ ಒಂದು ಸಾವಿರ ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಈ ಸಂದರ್ಭದಲ್ಲಿ ರೇಣುಕಾಚಾರ್ಯ ಪ್ರಕಟಿಸಿದರು. 07-08 ನೆ ಸಾಲಿನಲ್ಲಿ 146.93 ಹಾಗೂ 08-09ನೇ ಸಾಲಿನಲ್ಲಿ 153.95 ಕೋಟಿ ರೂ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಿ.ಎಂ ಗೆ ದೂರು : ಸಂತ್ರಸ್ಥರಿಗೆ ನೀಡುವ ಪರಿಹಾರದಲ್ಲಿ ಸಾಕಷ್ಟು ಲೋಪದೋಷ ಕಂಡುಬರುತ್ತಿವೆ. ಕಾತರಿಕಿಯಲ್ಲಿ ಅಧಿಕಾರಿಗಳ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಜನರಿಗೆ ವಂಜಿಸಿದ್ದಾರೆಂದು ದೂರಿದ್ದಾರೆ. 20 ಕೆ.ಜಿ ಅಕ್ಕಿ 5 ಕೆ.ಜಿ ಗೋಧಿ 1 ಕೆ.ಜಿ ಸಕ್ಕರೆ, ಬೇಳೆ, ಎಣ್ಣೆ ನೀಡುವ ಸೂಚನೆ ಇದ್ದರೂ ಕಡಿಮೆ ಪ್ರಮಾಣದಲ್ಲಿ ದವಸಧಾನ್ಯ ನೀಡುತ್ತಿದ್ದಾರೆ. ಮಾನ್ವಿ ತಾಲೂಕಿನ ಕಾತರಿಕಿಯಲ್ಲಿ ಇದನ್ನು ಸ್ವತಃ ನಾನೆ ಕಂಡಿದ್ದೇನೆ. ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರು ಬಸವನಗೌಡ ಬ್ಯಾಗವಾಡ್ ಜಿ.ಪಂ ಉಪಾಧ್ಯಕ್ಷ ದೂಡ್ಡ ಬಸವನಗೌಡ, ಮಾಜಿ ಶಾಸಕ ಗಂಗಾದರ ನಾಯಕ, ತಹಶೀಲ್ದಾರ್ ಹಾಜಿಭಾಯಿ, ನೆರೆ ಪರಿಹಾರ ಉಸ್ತುವಾರಿ ಅಧಿಕಾರಿಗಳಾದ ಜಿಲ್ಲಾ ಕಾರ್ಮಿಕಾಧಿಕಾರಿ ನಸೀರ್ ಅಹ್ಮದ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾಂಜಿನಯ್ಯ ಸೇರಿದಂತೆ ವಿವಿಧ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

ರಾಯಚೂರು ಮತ್ತು ಚಿನ್ನದ ಗಣಿಯ ಬಗ್ಗೆ ಹೆಚ್ಚು ತಿಳಿಯಿರಿ

http://www.meraraichur.com/hutti-gold-mines.asp

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X