ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?

|
Google Oneindia Kannada News

Dinakaran skips court, before SC meet
ಬೆಂಗಳೂರು, ಅ. 14 : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಮೊದಲ ಬಾರಿಗೆ ನ್ಯಾಯಾಲಯದ ಕಲಾಪಗಳನ್ನು ದಿಢೀರ್ ರದ್ದುಗೊಳಿಸಿದ ಪ್ರಸಂಗ ನಡೆದಿದೆ. ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಟ್ಟವಾಗಿ ಹರಡಿತ್ತು.

ಅವರ ಮುಂದೆ 28 ಪ್ರಕರಣಗಳ ವಿಚಾರಣೆ ನಡೆಯಬೇಕಿತ್ತು. ಪ್ರಕರಣಗಳ ಪಟ್ಟಿಯೂ ತಯಾರಾಗಿತ್ತು. ಆದರೆ, ಇದ್ದಕ್ಕಿಂತೆ ಅವರು ಕೋರ್ಟ್ ಕಲಾಪವನ್ನು ರದ್ದುಗೊಳಿಸಿದರು. ಆದರೆ, ಇಷ್ಟೊಂದು ಉಹಾಪೋಹಗಳ ನಡುವೆ ಬುಧವಾರಕ್ಕೆ (ಅ.14) ಅವರ ಮುಂದೆ 23 ಪ್ರಕರಣಗಳನ್ನು ವಿಚಾರಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೊಂದಡೆ ಲಂಡನ್ ಗೆ ತೆರಳಿರುವ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ಇಂದು ನವದೆಹಲಿಗೆ ಹಿಂತಿರುಗಲಿದ್ದಾರೆ. ದಿನಕರನ್ ಅವರ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನಲ್ಲಿ ಸಭೆ ನಡೆಯಲಿದೆ. ದಿನಕರನ್ ಸೇರಿದಂತೆ ಸುಪ್ರಿಂಕೋರ್ಟ್ ಗೆ ನೇಮಕವಾಗಿರುವ ಇತರ ನಾಲ್ವರು ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳ ತೀರ್ಮಾನ ನಡೆಯುವ ಸಾಧ್ಯತೆ ಇದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X