ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರ 'ಗುಂಡು' ಅವರಿಗೇ ವಾಪಾಸ್ !!

|
Google Oneindia Kannada News

Vijay Mallya
ನವದೆಹಲಿ, ಅ. 13 : ಮದ್ಯದ ದೊರೆ ವಿಜಯ್ ಮಲ್ಯ ದೀಪಾವಳಿ ಉಡುಗೊರೆಯಾಗಿ ಕಳುಹಿಸಿದ್ದ 'ಗುಂಡನ್ನು' ಬಿಜೆಪಿ ಸಂಸದ ಪ್ರಭಾತ್ ಝಾ ಅವರಿಗೇ ವಾಪಾಸ್ ಹಿಂದಿರುಗಿಸಿದ್ದಾರೆ. ನೀವು ಪ್ರೀತಿಯಿಂದ ಕಳುಹಿಸಿದ ಈ 'ಬಾಟಲ್' ಗೆ ನನ್ನ ಜೀವನದಲ್ಲಿ ಯಾವುದೇ ಸ್ಥಾನಮಾನವಿಲ್ಲ ಎಂದು ಝಾ ಮಲ್ಯ ಅವರಿಗೇ ಪತ್ರ ಮುಖೇನ ತಿಳುಹಿಸಿದ್ದಾರೆ.

ಮಲ್ಯಗೆ ಸಂಸತ್ತು, ಸಂಸದರು ಹಾಗು ಸಂಸದೀಯ ವ್ಯವಸ್ಥೆ ಬಗ್ಗೆ ಪ್ರಾಥಮಿಕ ಜ್ಞಾನವೂ ಇದ್ದಂತಿಲ್ಲ. ನನಗೆ ಅವರು ಪರಿಚಯವೇ ಇಲ್ಲ ಆದರೂ ಅವರು ಸಂಸದರನ್ನು 'ಬಾಟಲ್' ಮೂಲಕ ಅಳೆಯಲು ಹೊರಟಿರುವುದು ವಿಷಾದನೀಯ. ದೆಹಲಿ ಸರಕಾರ ಸಾರ್ವಜನಿಕವಾಗಿ ಮದ್ಯ ಸೇವಿಸಿದರೆ ಐದು ಸಾವಿರ ರೂಪಾಯಿ ದಂಡ ವಿಧಿಸುತ್ತದೆ. ಸಾರ್ವಜನಿಕವಾಗಿ ಮದ್ಯ ವಿತರಿಸುವ ನಿಮ್ಮಂತವರ ವಿರುದ್ದ ಯಾವ ಕ್ರಮ ಕೈಗೊಳ್ಳಬೇಕೆಂದು ಪ್ರಭಾತ್ ಝಾ ಮಾಜಿ ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ಅವರನ್ನು ಪ್ರಶ್ನಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X