ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನಲ್ಲಿರುವ ನೀರಿಗಾಗಿ ನಾಸಾ ಸಿಡಿಸಲಿದೆ ಬಾಂಬ್

By Staff
|
Google Oneindia Kannada News

NASA to bomb moon in search of water
ವಾಷಿಂಗ್ಟನ್, ಅ. 8 : ಬೆಳದಿಂಗಳು ಸೂಸುವ ಚಂದ್ರನ ಮೇಲೆ ನೀರಿನ ಅಂಶ ಇರುವ ಸಂಗತಿಯನ್ನು ಭಾರತದ ಚಂದ್ರಯಾನ-1 ಸ್ಫೋಟಿಸಿರುವ ಬೆನ್ನಲ್ಲೇ ಚಂದ್ರನ ಗರ್ಭದಲ್ಲಿ ಹುದುಗಿರುವ ನೀರನ್ನು ಬಗೆಯಲು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಚಂದ್ರನ ಮೇಲೆ ಬಾಂಬ್ ಸಿಡಿಸಲಿದೆ.

ಈ ಶುಕ್ರವಾರ, ಅಂದರೆ ಅಕ್ಟೋಬರ್ 9ರಂದು ನಾಸಾ LCROSS ಕೃತಕ ಉಪಗ್ರಹವನ್ನು ಉಡಾಯಿಸಲಿದೆ. ಈ ಉಪಗ್ರಹ ಸಿಡಿಸುವ ಸೆಂಟಾರ್ ರಾಕೆಟ್, ಬುಲೆಟ್ ವೇಗಕ್ಕಿಂತ ದ್ವಿಗುಣ ವೇಗದಲ್ಲಿ ಸಾಗಿ ಚಂದ್ರನ ಮೇಲೆ ದೊಡ್ಡ ರಂಧ್ರವನ್ನು ಸೃಷ್ಟಿಸಲಿದೆ. ಚಂದ್ರನ ಗರ್ಭದಲ್ಲಿ ಹುದುಗಿದೆ ಎನ್ನಲಾದ ಐಸ್ ರೂಪದಲ್ಲಿರುವ ನೀರಿರುವ ಪ್ರದೇಶದಲ್ಲಿ ರಾಕೆಟ್ಟನ್ನು ಸಿಡಿಸಲಾಗುತ್ತಿದೆ.

ರಾಕೆಟ್ ಸಿಡಿತದಿಂದಾಗಿ ಚಂದ್ರನ ಮೇಲ್ಮೈಯಿಂದ ಏಳುವ ಧೂಳನ್ನು ದೂರದರ್ಶಕದ ಸಹಾಯದಿಂದ ಭೂಮಿಯ ಮೇಲಿಂದಲೇ ನೋಡಬಹುದು ಎನ್ನಲಾಗಿದೆ. NASA-TV ಉಪಗ್ರಹದ ಉಡಾವಣೆ ಮತ್ತು ರಾಕೆಟ್ ಸ್ಫೋಟದ ಚಿತ್ರಣವನ್ನು ಬಿತ್ತರಿಸಲಿದೆ.

ನಾಸಾದ ಈ ಮಿಷನ್ ನಿಂದಾಗಿ ವಿಜ್ಞಾನಿಗಳಿಗೆ ಚಂದ್ರದ ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ಕೆಲವರು ಅಭಿಪ್ರಾಯವಾದರೆ, ಚಂದ್ರನ ಮೇಲೆ ಬಲಪ್ರಯೋಗ ಮಾಡುವುದು ಹಿತಕರವಲ್ಲ ಎಂದು ಕೆಲ ಬ್ಲಾಗರುಗಳು ಕಳವಳ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X