ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಭಾರತೀಯ ಎಂಬೆಸ್ಸಿ ಬಳಿ ಸ್ಫೋಟ

|
Google Oneindia Kannada News

Kabul Blast
ಕಾಬೂಲ್, ಅ. 8 : ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಮೂವರು ಮೃತಪಟ್ಟಿರುವ ವರದಿಯಾಗಿದೆ. ಆದರೆ, ಘಟನೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಸರಕಾರದ ಎರಡು ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದರಲ್ಲೊಂದು ವಿಶ್ವಸಂಸ್ಥೆಗೆ ಸೇರಿದ ವಾಹನವಾಗಿದೆ. ಘಟನೆ ನಡೆದ ಸ್ಥಳದಿಂದ ಭಾರತೀಯ ರಾಯಭಾರಿ ಕಚೇರಿ ಸಮೀಪದಲ್ಲಿದೆ. ಭಾರತೀಯ ರಾಯಭಾರಿ ಕಚೇರಿಯ ಕಿಡಕಿಗಳು ನಾಶಗೊಂಡಿವೆ. ಟೊಯೋಟಾ ಕರೋಲಾ ಕಾರಿನಲ್ಲಿ ಬಾಂಬ್ ಇರಿಸಿ ಸ್ಫೋಟಗೊಳಿಸಲಾಗಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಭಯೋತ್ಪಾದಕರು ಕಾಬೂಲ್ ನಲ್ಲಿರುವ ಭಾರತೀಯ ಕಚೇರಿ ಬಳಿ ಸ್ಫೋಟಗೊಂಡಿತ್ತು. ಆಗ 20 ಮಂದಿ ಸಾವನ್ನಪ್ಪಿದ್ದರು. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X