ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದರು ನಗರಿಯಲ್ಲೊಂದು ಬಿಪಿಒ ಕಂಪನಿ

|
Google Oneindia Kannada News

SPI, Mangalore
ಮಂಗಳೂರು, ಅ. 6 : ಅಟ್ಲಾಂಟ್ ಮೂಲದ ಸಾಫ್ಟ್ ವೇರ್ ಪ್ಯಾರಾಡೈಮ್ ಇನ್ಫೋಟೆಕ್ (ಎಸ್ ಪಿಐ) ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಂದರು ನಗರಿ ಮಂಗಳೂರಿನಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಬಿಸಿನೆಸ್ ಔಟ್ ಸೋರ್ಸಿಂಗ್ ಸೇವೆಯನ್ನೊಳಗೊಂಡ ಶಾಖೆಯೊಂದನ್ನು ತೆರೆದಿದೆ. ಮಂಗಳೂರಿನ ಬಲಮಠದಲ್ಲಿರುವ ಒಬೆರ್ಲಾ ಕಟ್ಟಡದಲ್ಲಿ ಎಸ್ ಪಿಐ ಕಾರ್ಯನಿರ್ವಹಿಸಲಿದೆ.

1997 ರಲ್ಲಿ ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ ಎಸ್ ಪಿಐ ಕಂಪನಿ ಸ್ಥಾಪನೆಯಾಗಿದ್ದು, ಕಂಪನಿ ಆರಂಭವಾದಾಗಿನಿಂದ ಸಾಫ್ಟ್ ವೇರ್ ಮತ್ತು ಬಿಸಿನೆಸ್ ಔಟ್ ಸೋರ್ಸಿಂಗ್ ಜೊತೆಗೆ ಮೆಡಿಕಲ್ ಟ್ರಾನ್ಸ್ ಕ್ರಿಪ್ಟ್ಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನ ಸೇವೆ ಒದಗಿಸುತ್ತಿರುವ ಎಸ್ ಪಿಐ ಎರಡು ಬಾರಿ ರಾಜ್ಯ ಸರಕಾರದಿಂದ ಅತ್ಯುತ್ತಮ ಕಂಪನಿ ಎಂಬ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ಮಂಗಳೂರಿನಲ್ಲಿ ಎಸ್ ಪಿಐ ಕಂಪನಿಯ ಶಾಖೆಯೊಂದನ್ನು ತೆರೆದಿರುವುದಕ್ಕೆ ಸಂತಸವಾಗಿದೆ. ಕಂಪನಿಯ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಉದ್ಯೋಗವಕಾಶ ಹೆಚ್ಚಿಸಲು ಕಂಪನಿಯ ಆಡಳಿತ ಮಂಡಳಿ ತೀರ್ಮಾನಿಸಿದೆ. ಜಾಗತಿಕ ಮಟ್ಟದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಅಗತ್ಯವಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಾಫ್ಟ್ ವೇರ್ ಮತ್ತು ಸಾಫ್ಟ್ ವೇರ್ ಯೇತರ ಸೇವೆ ಒದಗಿಸಲು ನಿರ್ಧರಿಸಿದೆ ಎಂದು ಎಸ್ ಪಿಐ ಕಂಪನಿಯ ಪ್ರಧಾನ ವ್ಯವಸ್ಥಾಪಕ ಹಾಗೂ ಕಾರ್ಯ ನಿರ್ವಾಹಣಾ ಅಧಿಕಾರಿ ಸಿದ್ ಮುಖರ್ಜಿ ತಿಳಿಸಿದ್ದಾರೆ.

ಸದ್ಯಕ್ಕೆ 100 ಮಂದಿ ಸಾಫ್ಟ್ ವೇರ್ ತಂತ್ರಜ್ಞರು ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಅಕ್ಟೋಬರ್ 5 ರಿಂದ ಮೊದಲ ಹಂತದ ಮೆಡಿಕಲ್ ಟ್ರಾನ್ಸ್ ಕ್ರಿಪ್ಸನ್ ತರಬೇತಿ ಮತ್ತು ಉತ್ಪಾದನೆಯನ್ನು ಆರಂಭಿಸಲಾಗಿದೆ ಸಿದ್ ಮುಖರ್ಜಿ ಹೇಳಿದರು.

ಕಂಪನಿ ಕಾರ್ಯನಿರ್ವಹಿಸುತ್ತಿರುವ ಸ್ಥಳ SPI Mangalore: 5th Floor, Oberle Towers, Balmatta, Mangalore. Ph- 0824- 6450108/09

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X