ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಜಿ ಮೊಬೈಲ್ ವಿನ್ಯಾಸದತ್ತ ಮೈಂಡ್ ಟ್ರೀ

|
Google Oneindia Kannada News

Mindtree
ಬೆಂಗಳೂರು, ಅ.6: ಮೈಂಡ್ ಟ್ರಿ ಸಾಫ್ಟ್‌ವೇರ್ ಸಂಸ್ಥೆ ಅತಿ ವೇಗದ ಅಂತರ್ಜಾಲ ಸಂಪರ್ಕ ಸಾಧ್ಯತೆಯುಳ್ಳ 3 ಜಿ ತಂತ್ರಜ್ಞಾನ ಆಧಾರಿಸಿದ ಮೊಬೈಲ್ ಹ್ಯಾಂಡ್‌ಸೆಟ್ ಉತ್ಪಾದನೆಗೆ ಮುಂದಾಗಿದೆ.'ವೈರ್‌ಲೆಸ್' ಉದ್ಯಮದ ಕ್ಯೊಸೆರಾ ಸಂಸ್ಥೆಯ ಸಂಶೋಧನಾ ಘಟಕವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ ಮೈಂಡ್ ಟ್ರೀ ಕಂಪನಿ ಮೊಬೈಲ್ ಹ್ಯಾಂಡ್‌ಸೆಟ್ ಉತ್ಪಾದನೆಗೆ ನಾಂದಿ ಹಾಡುತ್ತಿದೆ.

ಶೀಘ್ರದಲ್ಲೇ 3ಜಿ, 4ಜಿ ತಂತ್ರಜ್ಞಾನ ಆಧಾರಿತ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿಯಿದೆ. ದೂರ ಸಂಪರ್ಕ ಕ್ಷೇತ್ರಕ್ಕೆ ಉತ್ತಮ ಬೆಳವಣಿಗೆಯಿದೆ' ಎಂದು ಸಂಸ್ಥೆಯ ಮೊಬೈಲ್ ಕ್ಷೇತ್ರದ ಅಧ್ಯಕ್ಷ ಮತ್ತು ಸಿಇಒ ಸಮರ್ಥ ರಾಘವ್ ಹೇಳಿದರು.

'ಮೊಬೈಲ್ ವಹಿವಾಟಿನೊಂದಿಗೆ ಸಂಸ್ಥೆಯ ಆದಾಯವನ್ನು 2014ರವೇಳೆಗೆ ಶತಕೋಟಿ ಡಾಲರ್‌ಗೆ ಹೆಚ್ಚಿಸಿಕೊಳ್ಳುವ ಗುರಿಯಿದೆ. ಗ್ರಾಹಕ ಆಧಾರಿತ ಅಭಿವೃದ್ಧಿ ಕ್ಷೇತ್ರದ ಮುಂದುವರಿಯುತ್ತೇವೆ. 45 ದಶಲಕ್ಷ ಗ್ರಾಹಕರನ್ನು ಹೊಂದಿರುವ ಕ್ಯೊಸೆರಾ ಸ್ವಾಧೀನ ಕಂಪನಿಗೆ ಹೊಸ ಬಲ ನೀಡಿದೆ' ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಎಸ್.ಜಾನಕಿರಾಮನ್ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X