ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಮೋರ್ಚಾ ನಾಯಕರಾಗಿ ಜಸ್ವಂತ್ ಸಿಂಗ್

|
Google Oneindia Kannada News

Jaswanth Singh
ನವದೆಹಲಿ, ಅ. 5 : ಉಚ್ಚಾಟಿತ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ತನ್ನ ರಾಜಕೀಯ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಿರುವ ನಡುವೆಯೇ, ಸಂಸತ್ತಿನಲ್ಲಿ ಹೊಸತಾಗಿ ರೂಪುಗೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ನಾವು ಸರಕಾರಕ್ಕೆ ನಿರ್ಣಾಯಕ ವಿರೋಧಪಕ್ಷವಾಗುವ ನಿಟ್ಟಿನಲ್ಲಿ ಗುಂಪೊಂದನ್ನು ರಚಿಸಿದ್ದೇವೆ ಎಂಬುದಾಗಿ ಲೋಕಮೋರ್ಚಾ' ಎಂಬ ಈ ಗುಂಪಿನ ನಾಯಕ ಹಾಗೂ ಮಾಜಿ ಸಚಿವರೂ ಆಗಿರುವ ದಿಗ್ವಿಜಯ್ ಸಿಂಗ್ ತಿಳಿಸಿದರು. ಜಾರ್ಖಂಡ್‌ನ ಮಾಜಿ ಸ್ಪೀಕರ್ ಇಂದರ್ ಸಿಂಗ್ ನಾಮಧಾರಿ (ಛಾತ್ರಾ ಎಂಪಿ) ಗುಂಪಿನ ಉಪನಾಯಕರಾಗಲಿದ್ದಾರೆ.

ಕೊಲ್ಹಾಪುರದ ಎಂಪಿ ರಾಜುಶೆಟ್ಟಿ ಕೂಡಾ ಇದರಲ್ಲಿ ಇರುತ್ತಾರೆ. ಪತ್ರಕರ್ತರಾದ ಎಂ.ಜೆ.ಅಕ್ಬರ್, ಪ್ರಭಾಶ್ ಜೋಷಿ ಇದರ ಜೊತೆ ಇರುತ್ತಾರೆ. ತಾನು ಮೋರ್ಚಾದ ಅಖಿಲ ಭಾರತೀಯ ಸಂಚಾಲಕನಾಗಿ ಆಯ್ಕೆಯಾಗಿರುವುದಾಗಿ ಸಿಂಗ್ ಹೇಳಿದರು. ಸಿಂಗ್ ಈ ಹಿಂದೆ ಜೆಡಿಯು ನಾಯಕರಾಗಿದ್ದರು. ಪ್ರತಿಪಕ್ಷದ ನೆಲೆಯಲ್ಲಿ ಬಿಜೆಪಿಯಲ್ಲಿದ್ದ ವೇಳೆ ತನಗೆ ನೀಡಲಾದ ಸ್ಥಾಯೀ ಸಮಿತಿಯ ಅಧ್ಯಕ್ಷತೆಯನ್ನು ಬಿಟ್ಟುಕೊಡಲು ಜಸ್ವಂತ್ ಸಿಂಗ್ ನಿರಾಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X