ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮನವಿ

|
Google Oneindia Kannada News

ಸಮಾಜ ಬಾಂಧವರಲ್ಲಿ ಮನವಿ ...

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಪ್ರವಾಹದಿಂದ ನಲುಗಿ ಹೋಗಿದೆ. ನಿಲ್ಲದ ಮಳೆ,ಉಕ್ಕಿ ಹರಿಯುವ ನದಿಗಳಿಂದಾಗಿ ಸಾವಿರಾರು ಗ್ರಾಮಗಳು ಜಲಾವೃತವಾಗಿದೆ. ದೊಡ್ಡ ಪ್ರಮಾಣದಲ್ಲಿ ಮನೆಗಳು ಕುಸಿದು ಲಕ್ಷಾಂತರ ಜನ ನಿರ್ವಸಿತರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾವಿರಾರು ಕಾರ್ಯಕರ್ತರು ಪ್ರವಾಹ ಪೀಡಿತರಿಗೆ ನೆರವಾಗಲು ಧಾವಿಸಿದ್ದಾರೆ.

ಜಲಾವೃತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ, ಆಹಾರ, ವಸತಿ, ಒದಗಿಸುವ ತುರ್ತು ಕಾರ್ಯಗಳು ಪ್ರಾರಂಭವಾಗಿವೆ. ರಾಯಚೂರಿನಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ಆಹಾರಪೊಟ್ಟಣಗಳನ್ನು ವಿತರಿಸಲಾಗಿದೆ. ಗುಳೇದಗುಡ್ಡ ತಾಲೂಕಿನ 5 ಹಳ್ಳಿಗಳ ಸಂತ್ರಸ್ತರಿಗೆ ನಿರಾಶ್ರಿತ ಶಿಬಿರ, ಗದಗ ಜಿಲ್ಲೆಯ ಹೊಳೆ ಆಲೂರಿನಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ. ಬೆಳಗಾವಿ, ವಿಜಾಪುರ, ಬಾಗಲಕೋಟೆ ಸುತ್ತ ಮುತ್ತ ನಿರ್ವಸಿತರಿಗಾಗಿ ಪರಿಹಾರ ಶಿಬಿರ ತೆರೆಯಲಾಗುತ್ತಿದೆ.

ಇನ್ನೂ ನೂರಾರು ಕಡೆಗಳಲ್ಲಿ ಪರಿಹಾರ ಕಾರ್ಯದ ಅವಶ್ಯಕತೆಯಿದೆ. 50 ಲಕ್ಷಕ್ಕೂ ಮಿಕ್ಕ ನೊಂದ ಜೀವಗಳಿಗೆ ಸಾವಿರಾರು ನೆರವಿನ ಕೈಗಳು ಅಗತ್ಯವಿದೆ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ.ನಿಮ್ಮ ಕಳಕಳಿಯ ಧನಸಹಾಯವನ್ನು ನಮಗೆ ತಲುಪಿಸಿ. ನಿಮ್ಮ ನೆರವನ್ನು ರಗ್ಗು, ಕಂಬಳಿ, ಬೆಡ್‌ಶೀಟ್‌ಗಳ ಮೂಲಕವೂ ನೀಡಬಹುದು.

ಚೆಕ್/ಡಿ.ಡಿ.ಗಳನ್ನು

'ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ' (RSS sanchalita samtrasta parihara nidhi)
ಹೆಸರಿಗೆ ನೀಡಿ. ಇದಕ್ಕೆ 80ಜಿ ಅನ್ವಯ ಆದಾಯ ತೆರಿಗೆ ವಿನಾಯಿತಿ ಇದೆ.

ತಲುಪಿಸಬೇಕಾದ ವಿಳಾಸ :

ಕೇಶವಕೃಪ,74,ರಂಗರಾವ್ ರಸ್ತೆ, ಬೆಂಗಳೂರು-560004.
ದೂರವಾಣಿ : 09480582027,080-26610760
ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ - ಮ .ವೆಂಕಟರಾಮು, ಡಾ.ಖಗೇಶನ್ ಪಟ್ಟಣ ಶೆಟ್ಟಿ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X