ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ

|
Google Oneindia Kannada News

Thailand
ಥೈಲ್ಯಾಂಡ್ ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲಿ ಒಂದು. ಈ ದೇಶ ಮುನ್ನಡೆಯುತ್ತಿರುವುದು ಮತ್ತು ಇಲ್ಲಿನ ಜನರು ಬದುಕುತ್ತಿರುವುದು ಕೇವಲ ಪ್ರವಾಸೋದ್ಯಮದಿಂದ ಎಂದರೆ ನಿಜಕ್ಕೂ ಯಾರಿಗೇ ಆದರೂ ಅಚ್ಚರಿ ಆದೀತು, ಆದರೆ ವಾಸ್ತವ ಸತ್ಯ. ಪ್ರವಾಸೊದ್ಯಮವನ್ನೇ ನಂಬಿರುವ ಇಲ್ಲಿನ ಸರ್ಕಾರದ ಮೊದಲ ಆದ್ಯತೆ ಕೂಡಾ ಪ್ರವಾಸಿಗರಿಗೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಟ್ಟಪ್ಪಣೆ ಅಲ್ಲಿನ ಜನರಿಗಿದೆಯಂತೆ, ಆದ್ದರಿಂದಲೇ ಥೈಲ್ಯಾಂಡ್ ಪ್ರವೇಶಿಸುವ ಪ್ರತಿಯೊಬ್ಬ ಪ್ರವಾಸಿಗನನ್ನು ಅಲ್ಲಿನ ಜನರು ದೇವರಂತೆ ಕಾಣುತ್ತಾರೆ. ನೀವು ಥೈಲ್ಯಾಂಡ್‌ಗೆ ತೆರಳಲು ಥಾಯ್' ವಿಮಾನದ ದ್ವಾರಪ್ರವೇಶಿಸುತ್ತಿದ್ದಂತೆಯೇ ವಿಮಾನದ ಗಗನಸಖಿಯರು (ಥೈಲ್ಯಾಂಡ್ ಮೂಲದವರು) ಕೈಮುಗಿದು ಬರಮಾಡಿಕೊಳ್ಳುತ್ತಾರೆ. ಅವರು ಕೈಜೋಡಿಸಿ ಮುಗಿಯುವ ಭಂಗಿಯಲ್ಲೂ ಧನ್ಯತೆ ಇರುತ್ತದೆ.

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುವರ್ಣಭೂಮಿ'ಯಲ್ಲಿ ನೀವು ಇಳಿಯುತ್ತಿದ್ದಂತೆಯೇ ಅಲ್ಲೂ ಕೈಮುಗಿದು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ. ನೀವು ಅಂಗಡಿ-ಮಳಿಗೆ ಪ್ರವೇಶಿಸುವಾಗಲೂ ಕೈಮುಗಿದು ಸ್ವಾಗತ, ನಿರ್ಗಮಿಸುವಾಗಲೂ ಅಂಥದ್ದೇ ಸ್ವಾಗತ. ನೀವು ಏನನ್ನು ಖರೀದಿಸದಿದ್ದರೂ ಅವರ ಮುಖದಲ್ಲಿ ಬೇಸರವಿಲ್ಲ ಅಥವಾ ಇಲ್ಲಿ ನಾವು ಕಾಣುವ ಹಾಗೆ ಮುಖಸಿಂಡರಿಸಿಕೊಂಡು ಶಪಿಸುವುದಿಲ್ಲ.

ಥೈಲ್ಯಾಂಡ್ ದೇಶದ ಬಗ್ಗೆ ಯಾವುದೇ ಪ್ರವಾಸಿಗರಿಗೇ ಆಗಲೀ ಮೆಚ್ಚುಗೆ ಬರದಿರಲು ಕಾರಣಗಳೇ ಇಲ್ಲ. ಇಲ್ಲಿ ಬಹುಮುಖ್ಯವಾಗಿ ಗಮನ ಸೆಳೆಯುವ ಅಂಶವೆಂದರೆ ಸ್ವಚ್ಚತೆ. ಅಲ್ಲಿರುವ ರಸ್ತೆಗಳು, ಹೆದ್ದಾರಿಗಳು ನಮ್ಮ ಮನೆಯ ಪಡಸಾಲೆಗಿಂತಲೂ ನೀಟಾಗಿರುತ್ತವೆ ಅಂದರೆ ಉತ್ಪ್ರೇಕ್ಷೆ ಅಂದುಕೊಳ್ಳುವಿರಿ, ಆದರೆ ಖಂಡಿತಕ್ಕೂ ಅಲ್ಲಿನ ರಸ್ತೆಗಳು ಅಂಥಮೆಚ್ಚುಗೆಗೆ ಅರ್ಹವಾಗಿವೆ.

ನಮ್ಮ ರಾಜ್ಯದ ಅಥವಾ ಜಿಲ್ಲೆಯ ಯಾವುದೇ ನಗರದಲ್ಲೇ ಆಗಲಿ ವಾಹನಗಳು ಬ್ಲಾಕ್ ಆಗುವುದು, ರಸ್ತೆ ಸಂಚಾರ ಅಸ್ತವ್ಯಸ್ತವಾಗುದು ಸರ್ವೇಸಾಮಾನ್ಯ. ಆ ದೇಶದ ಹೆದ್ದಾರಿಗಳಲ್ಲೂ ಕೂಡಾ ಬ್ಲಾಕ್ ಆಗುವ ಪ್ರಮೇಯವೇ ಇಲ್ಲ, ಯಾಕೆಂದರೆ ಹೆದ್ದಾರಿ ಎಲ್ಲೂ ಒಂದನ್ನೊಂದು ಸಂಧಿಸುವಾಗಲೂ ಮತ್ತೊಂದು ವಾಹನ ನಿಂತು ಹೋಗಬೇಕಾಗಿಲ್ಲ. ಅಂಥ ಇಂಜಿನಿಯರಿಂಗ್ ಪರಿಣತಿ ಆ ಹೆದ್ದಾರಿ ನಿರ್ಮಾಣದಲ್ಲಿ ಕೆಲಸ ಮಾಡಿವೆ, ಆದ್ದರಿಂದಲೇ ಅಲ್ಲಿನ ಹೆದ್ದಾರಿಗಳೂ ಕೂಡಾ ಇತರ ದೇಶಗಳಿಗೆ ಮಾದರಿ ಎನ್ನಬಹುದು.

ನಾವು ಎಲ್ಲೆಂದರಲ್ಲಿ ಉಗುಳಬಹುದು ಇಲ್ಲಿ. ಯಾಕೆಂದರೆ ನಮ್ಮದು ಸ್ವತಂತ್ರದೇಶ ಮತ್ತು ನಾವೂ ಸ್ವತಂತ್ರರು, ನಾವು ಉಗುಳುವುದನ್ನು ಯಾರೂ ಇಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಥೈಲ್ಯಾಂಡ್ ದೇಶದ ರಸ್ತೆಯಲ್ಲೂ ನೀವು ಉಗುಳುವಂತಿಲ್ಲ. ನಮ್ಮೂರಲ್ಲಿ ನಿಮ್ಮ ಮೂಗಿನ ಸಿಂಬಳವನ್ನು ರಸ್ತೆಗೆ ಎಸೆದು ಅಥವಾ ನೀವು ಪ್ರಯಾಣಿಸುವ ವಾಹನದ ಹೊರಕವಚಕ್ಕೆ ಒರೆಸಿ ಕರವಸ್ತ್ರದಿಂದ ಕೈಒರೆಸಿಕೊಂಡು ಸುಮ್ಮನಾಗಬಹುದು. ಆದರೆ ಅಲ್ಲಿ ಉಗುಳುವಂತಿಲ್ಲ ಅಥವಾ ಪ್ರಯಾಣಿಸುವ ವಾಹದ ಹೊರಕವಚಕ್ಕೆ ಒರೆಸಿ ಏನೂಗೊತ್ತಿಲ್ಲದವರಂತೆ ನಟಿಸುವಂತಿಲ್ಲ, ಒಂದುವೇಳೆ ಭಾರತದಂತೆಯೇ ಅಲ್ಲೂ ಮಾಡಿದರೆ ಎಚ್ಚರಿಕೆ ಪಕ್ಕದಲ್ಲಿದ್ದವರಿಂದಲೇ ಬರುತ್ತದೆ. ಆದ್ದರಿಂದಲೇ ಅಲ್ಲಿನ ರಸ್ತೆಗಳಲ್ಲಿ ಯಾರೂ ಉಗುಳುವಿಲ್ಲ, ಅದಕ್ಕೇ ಅಲ್ಲಿನ ರಸ್ತೆಗಳು ಅಷ್ಟು ನೀಟಾಗಿವೆ.

ರಸ್ತೆಗಳ ಮೇಲೆ ಅಥವಾ ರಸ್ತೆ ಅಕ್ಕಪಕ್ಕದಲ್ಲಿ ಕಾಗದ, ತ್ಯಾಜ್ಯವನ್ನು ಎಸೆಯುವಂತಿಲ್ಲ. ನಿಮ್ಮ ಕೈಯಲ್ಲಿ ಕಾಗದ, ಪ್ಲಾಸ್ಟಿಕ್ ಇದ್ದರೆ ತ್ಯಾಜ್ಯ ಎಸೆಯಲೆಂದೇ ಅಲ್ಲಲ್ಲಿ ಇಟ್ಟಿರುವ ಕಸದತೊಟ್ಟಿಯನ್ನು ಬಳಕೆ ಮಾಡಬೇಕು. ರಸ್ತೆಗೆ ತ್ಯಾಜ್ಯ ಎಸೆದರೆ ನಿಮ್ಮನ್ನು ಪೊಲೀಸರು ಮೊದಲು ಸ್ವಾಗತಿಸಿ, ನಂತರ ನೀವು ಮಾಡಿದ ತಪ್ಪಿಗೆ ದಂಡಕಟ್ಟಿಸುತ್ತಾರೆ. ನಿಜಕ್ಕೂ ಇಂಥವೆಲ್ಲಾ ಸಂಗತಿಗಳು ನಮಗೆ ಚಿಕ್ಕದಾಗಿ ಕಾಣುತ್ತವೆ, ಆದರೆ ಥೈಲ್ಯಾಂಡ್ ದೇಶ ಸುತ್ತಾಡಿದರೆ ಇಂಥ ಅನೇಕ ಸಂಗತಿಗಳು ಗಮನ ಸೆಳೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X