ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ ಠಾಕ್ರೆ ಆಧುನಿಕ ಜಿನ್ನಾ : ಬಾಳಾ ಠಾಕ್ರೆ

|
Google Oneindia Kannada News

Bal Thackrey
ಮುಂಬೈ, ಅ. 1 : ಪಾಕಿಸ್ತಾನದ ಸಂಸ್ಥಾಪಕ ಮೊಹ್ಮದ್ ಅಲಿ ಜಿನ್ನಾಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಜೆಪಿಯಲ್ಲಿ ಭಾರಿ ಬಿರುಗಾಳಿಯ ಎದ್ದು ಹಿರಿಯ ನಾಯಕ ಜಸ್ವಂತ್ ಸಿಂಗ್ ತಲೆದಂಡವಾಗಿದ್ದು ಗೊತ್ತಿರುವ ಸಂಗತಿ. ಇದೀಗ ಮಹಾರಾಷ್ಟ್ರದಲ್ಲೊಬ್ಬ ಅಧುನಿಕ ಜಿನ್ನಾ ಹುಟ್ಟಿಕೊಂಡಿದ್ದಾರಂತೆ, ಸ್ವತಃ ಮುಂಬೈ ಹುಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಬಾಳಾ ಠಾಕ್ರೆ ಆಧುನಿಕ ಜಿನ್ನಾ ಎಂದು ಜರಿದಿದ್ದಾರೆ. ಬ್ರಿಟಿಷರಿಂದ ಪ್ರೇರಿತರಾದ ಜಿನ್ನಾ ಅಖಂಡ ಭಾರತವನ್ನು ಒಡೆದರು. ಈಗಿನ ಕಾಲದ ಜಿನ್ನಾ ರಾಜ್ ಠಾಕ್ರೆ, ಮರಾಠಿ ಜನರನ್ನು ಒಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮರಾಠಿ ಮತಗಳನ್ನು ಒಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ರಾಜ್ ಠಾಕ್ರೆಯನ್ನು ಹುರಿದುಂಬಿಸತೊಡಗಿದೆ. ಅವರ ರಾಜಕೀಯ ಮುಸ್ಲಿಂ ಲೀಗ್ ಗಿಂತ ಭಯಾನಕವಾದದ್ದು. ಧರ್ಮದ ಆಧಾರದ ಮೇಲೆ ಜಿನ್ನಾ ಮತ್ತು ಮುಸ್ಲಿಂ ಲೀಗ್ ಭಾರತವನ್ನು ಒಡೆದು ಪಾಕಿಸ್ತಾನ ಕೊಡಿ ಎಂಬ ಬೇಡಿಕೆ ಇಟ್ಟಿತ್ತು ಎಂದು ಬಾಳಾ ಠಾಕ್ರೆ ಕಿಡಿಕಾರಿದ್ದಾರೆ.

ಅಕ್ಟೋಬರ್ 13 ರಿಂದ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಬಿಜೆಪಿ, ಶಿವಸೇನೆ ಪಕ್ಷಗಳು ಮೈತ್ರಿಮಾಡಿಕೊಂಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಗ್ಗುಬಡಿಯಬೇಕು ಎಂದು ತೀರ್ಮಾನಿಸಿ ಭಾರಿ ಪ್ರಚಾರ ಹಾಗೂ ವಿನೂತನ ತಂತ್ರಗಾರಿಕೆಯನ್ನು ನಡೆಸಿದೆ. ಆದರೆ, ಬಿಜೆಪಿ ಮತ್ತು ಶಿವಸೇನೆಗೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ(ಎಂಎನ್ಎಸ್) ಸೇನೆ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ. ಎಂಎನ್ಎಸ್ ಮರಾಠಿ ಮತಗಳನ್ನು ಕಸಿದುಕೊಂಡರೂ ಅದು ಬಿಜೆಪಿ ಮೈತ್ರಿ ಬಲವಾದ ಹೊಡೆತವೆ ಎಂದೆಣಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X