ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ಸಿ : ಬಾನುಲಿಯಲ್ಲಿ ವಿಶೇಷ ಕಾರ್ಯಕ್ರಮ

By Staff
|
Google Oneindia Kannada News

Vishveshwara Hegde kageri
ಬೆಂಗಳೂರು, ಅ. 1 : 2010ರ ಮಾರ್ಚ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಬದಲಾದ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಪರೀಕ್ಷೆಯ ಪದ್ಧತಿ ಕುರಿತಂತೆ ವಿದ್ಯಾರ್ಥಿಗಳಿಗೆ ಆಕಾಶವಾಣಿ ವಿಶೇಷ ಕಾರ್ಯಕ್ರಮ ಬಿತ್ತರಿಸಲಿದೆ. ಶಿಕ್ಷಣ ತಜ್ಞರು ಅಕ್ಟೋಬರ್ 6ರಿಂದ 11ರ ವರೆಗೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಈ ಸರಣಿ ಮಾಲಿಕೆ ಪ್ರತಿ ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಾದ್ಯಂತ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರಗೊಳ್ಳಲಿದೆ. ಸಮಯ ಮಧ್ಯಾಹ್ನ 2.35ರಿಂದ 3.05.

ಕಾರ್ಯಕ್ರಮಗಳ ಪಟ್ಟಿ:

ಅ. 6 : ಪ್ರಥಮ ಭಾಷೆ ಕನ್ನಡ
ಅ. 7 : ದ್ವಿತೀಯ ಭಾಷೆ
ಅ. 8 : ವಿಜ್ಞಾನ
ಅ. 13 : ಗಣಿತ
ಅ. 14 : ಸಮಾಜ ವಿಜ್ಞಾನ
ಅ. 15 : ಹಿಂದಿ
ಅ. 20 : ಪ್ರಥಮ ಭಾಷೆ ಆಂಗ್ಲ
ಅ. 21 : ಪ್ರಥಮ ಭಾಷೆ ಸಂಸ್ಕೃತ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X