ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಪೊಲೀಸ್ ಪಡೆಗೆ ತಮಿಳರು?

By Staff
|
Google Oneindia Kannada News

Sri Lanka to recruit Tamils in police force
ಕೊಲೊಂಬೊ, ಸೆ.30: ತಮಿಳರನ್ನು ತನ್ನ ಪೊಲೀಸ್ ಪಡೆಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಶ್ರೀಲಂಕಾ ಸರ್ಕಾರ ಮಂಗಳವಾರ ಘೋಷಿಸಿದೆ. ಉತ್ತರ ಜಾಫ್ನಾ ಪ್ರಾಂತ್ಯದಲ್ಲಿ ಪೊಲೀಸ್ ಪೇದೆ ಹುದ್ದೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಅನೇಕ ತಮಿಳರು ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸ್ ವಕ್ತಾರ ನಿಮಲ್ ಮೆದಿವಾಕ ಹೇಳಿದ್ದಾರೆ.

ಸುಮಾರು 500 ಹುದ್ದೆಗಳಿಗೆ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. 1979 ರ ನಂತರ ತಮಿಳರ ಜೊತೆ ಕಾಳಗದಿಂದ ಈ ಪ್ರಾಂತ್ಯದಲ್ಲಿ ನೇಮಕಾತಿ ಸಾಧ್ಯವಿರಲಿಲ್ಲ. ಕಳೆದ ಮೇ ತಿಂಗಳಿನಲ್ಲಿ ಎಲ್ ಟಿಟಿಇ ಸರ್ವಪತನವಾದ ಮೇಲೆ ತಮಿಳು ಬಂಡಾಯಗಾರರಿಗೂ ಪೊಲೀಸ್ ಪಡೆಯಲ್ಲಿ ನೇಮಕಾತಿ ಅವಕಾಶವನ್ನು ಶ್ರೀಲಂಕಾ ಸರ್ಕಾರ ಕಲ್ಪಿಸಿದೆ ಎಂದು ಮೆದಿವಾಕಾ ಹೇಳಿದರು.

1980ರ ಎಲ್ ಟಿಟಿಇ ಬಂಡಾಯದ ಕಾರಣ ತಮಿಳರು ಹೆಚ್ಚಾಗಿರುವ ಭಾಗಗಳಲ್ಲಿ ಪೊಲೀಸ್ ಪಡೆಗೆ ಸಿಂಹಳೀಯರನ್ನು ನೇಮಕ ಮಾಡಲಾಗುತ್ತಿತ್ತು. ತಮಿಳರು ಅಲ್ಪಸಂಖ್ಯಾತರಾಗಿರುವ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರು.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X