ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನೀತಿಪಾಠ : ಜೆಡಿಎಸ್ ಕಟು ಟೀಕೆ

By Staff
|
Google Oneindia Kannada News

YSV Datta
ಬೆಂಗಳೂರು, ಸೆ. 30 : ಗೋಧ್ರಾ ಘಟನೆಯ ಮಾರಣಹೋಮ ಜನರ ಮನಸ್ಸಿನಿಂದ ಇನ್ನು ಮಾಸದಿರುವಾಗಲೇ ರಾಜ್ಯದ ಬಿಜೆಪಿ ನಾಯಕರುಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ನೀತಿಪಾಠ ಹೇಳಿಸಿಕೊಳ್ಳುತ್ತಿರುವುದು ರಾಜ್ಯಕ್ಕೆ ಮಾಡಿದ ಅವಮಾನ. ಇದು ಕನ್ನಡಿಗರನ್ನು ದಡ್ಡರು ಎಂದು ಬಿಂಬಿಸುತ್ತದೆ ಮತ್ತು ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಜನತಾದಳ ವಕ್ತಾರ ವೈ ಎಸ್ ವಿ ದತ್ತಾ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಸಚಿವರುಗಳು ಅಧಿಕಾರಕ್ಕೆ ಬಂದು ಒಂದು ವರ್ಷದ ನಂತರ ಮೋದಿ ಅವರಿಂದ ನೀತಿಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳು ಅನುಭವವಿಲ್ಲದೇ ಅಧಿಕಾರ ನಡೆಸಿದ್ದಾರೆನ್ನುವ ಅನುಮಾನ ಕಾಡುತ್ತಿದೆ ಅಥವಾ ಯಡಿಯೂರಪ್ಪ ದಡ್ದರಾಗಿರಬಹುದು ಎಂದು ದತ್ತಾ ಲೇವಡಿ ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟ ಸಭೆ ಟೂರಿಂಗ ಟಾಕೀಸ್ ತರ ಆಗಿ ತನ್ನ ಪಾವಿತ್ರ್ಯತೆ ಕಳೆದುಕೊಂಡಿದೆ. ಬಿಜೆಪಿಯ ಚಿಂತನಾಸಭೆ ಆರ್ ಎಸ್ ಎಸ್ ಬೈಠಕ್ ಆಗಿದೆ. ಬಿಜೆಪಿ ಸರಕಾರದ ಜನವಿರೋಧಿ ಖಂಡಿಸಿ ಅಕ್ಟೋಬರ್ 7ರಿಂದ 11ರ ವರೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ದತ್ತಾ ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X