ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಪೈಲೆಟ್ ಗಳ ಮುಷ್ಕರ ಅಂತ್ಯ

By Staff
|
Google Oneindia Kannada News

Air India
ನವದೆಹಲಿ, ಸೆ.30 : ವೇತನ ಕಡಿತಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಏರ್ ಇಂಡಿಯಾ ಪೈಲೆಟ್ ಗಳು ಕೈಬಿಟ್ಟಿದ್ದಾರೆ. ವಿಮಾನಯಾನ ಇಲಾಖೆಯಿಂದ ಅಧಿಕೃತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಏರ್ ಇಂಡಿಯಾ ಪೈಲೆಟ್ ಗಳ ಮುಖ್ಯಸ್ಥ ಕ್ಯಾಪ್ಟನ್ ವಿ ಕೆ ಬಲ್ಲಾ ಸ್ಪಷ್ಟಪಡಿಸಿದ್ದಾರೆ.

ವೇತನ ಕಡಿತವನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ಏರ್ ಇಂಡಿಯಾದ ಪೈಲೆಟ್ ಗಳು ಮುಷ್ಕರ ನಡೆಸುತ್ತಿದ್ದರು. ಪೈಲೆಟ್ ಗಳ ಮುಷ್ಕರಕ್ಕೆ ಕೇಂದ್ರ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪೈಲೆಟ್ ಗಳ ಬೇಡಿಕೆ ಈಡೇರಿಸಲಾಗುವು, ಪೈಲೆಟ್ ಗಳ ಮುಷ್ಕರದಿಂದ ಪ್ರಯಾಣಿತಕರಿಗೆ ತೀವ್ರ ತೊಂದರೆ ಉಂಟಾಗಲಿದ್ದು, ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಎಂದು ಅವರು ಒತ್ತಾಯಿಸಿದ್ದರು.

ಇದರಿಂದ ಪೈಲೆಟ್ ಗಳು ಇಂದು ಬೆಳಗ್ಗೆ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿರುವ ತೀರ್ಮಾನ ಘೋಷಿಸಿದ್ದಾರೆ. ಪೈಲೆಟ್ ಗಳ ಮುಷ್ಕರದಿಂದ ಪ್ರಯಾಣಿಕರು ಅನುಭವಿಸಿದ ತೊಂದರೆಗೆ ಪೈಲೆಟ್ ಗಳ ಸಂಘ ಕ್ಷಮೆಯಾಚಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X