ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯೊಸೆರಾ ಖರೀದಿಸಿದ ಮೈಂಡ್ ಟ್ರೀ

By Staff
|
Google Oneindia Kannada News

Kyocera wireless india
ಬೆಂಗಳೂರು, ಸೆ.29:ಟೆಲಿಕಾಂ ಹಾಗೂ ನಿಸ್ತಂತು ತಂತ್ರಜ್ಞಾನ ಸೇವೆ(wireless technology service)ಕ್ಷೇತ್ರದಲ್ಲಿ ಹೆಸರು ಮಾಡಿರುವ ಸ್ಯಾನ್ ಡಿಯಾಗೋ ಮೂಲದ ಕ್ಯೊಸೆರಾ ವಯರ್ ಲೆಸ್ ಕಾರ್ಪೊರೇಷನ್ ಕಂಪನಿಯ ಬೆಂಗಳೂರಿನ ಸಂಶೋಧನಾ ಕೇಂದ್ರವನ್ನು ಮೈಂಡ್ ಟ್ರೀ ಸಂಸ್ಥೆ ಖರೀದಿಸಿದೆ.

ಸುಮಾರು 6 ಮಿಲಿಯನ್ ಡಾಲರ್(ಸುಮಾರು 28,81,15,246ರು)ಹಣ ತೆತ್ತು ಕ್ಯೊಸೆರಾ ಸಂಶೋಧನಾ ಕೇಂದ್ರವನ್ನು ಮೈಂಡ್ ಟ್ರೀ ತನ್ನದಾಗಿಸಿಕೊಂಡಿದೆ. ಖರೀದಿಯ ಉಳಿದ ಮೊತ್ತ, ಮುಂಬರುವ ಆರ್ಧಿಕ ವರ್ಷದ ಆದಾಯ-ವ್ಯಯದ ಲೆಕ್ಕಾಚಾರದ ಮೇಲೆ ನಿಂತಿದೆ ಎಂದು ಮೈಂಡ್ ಟ್ರೀ ವಕ್ತಾರರು ಹೇಳಿದ್ದಾರೆ.

ಭಾರತದ ಕ್ಯೂಸೆರಾ ಕೇಂದ್ರ ದಲ್ಲಿ ಸುಮಾರು 600 ಜನ ಕೆಲಸಗಾರರಿದ್ದು, ನಿಸ್ತಂತು ಕ್ಷೇತ್ರದ ಅಭಿವೃದ್ಧಿ, ತಂತ್ರಾಂಶ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ. ಹೊಸ ಬಗೆಯ ನಿಸ್ತಂತು ಉಪಕರಣ ವಿನ್ಯಾಸ ಹಾಗೂ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಾಗುವುದು. ಈ ಒಪ್ಪಂದ ಹಾರ್ಡ್ ವೇರ್‍ ಹಾಗೂ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಹಾಯ ಕವಾಗಲಿದೆ ಎಂದು ಮೈಂಡ್ ಟ್ರೀ ಪ್ರಾಡೆಕ್ಟ್ ವಲಯದ ಸಿಇಒ ಜಾನಕಿರಾಮ್ ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X